ಕಾರ್ಕಳ ಮಂಜುನಾಥ ಪೈ ಕಾಲೇಜಿನಲ್ಲಿ ನೂತನ ಲ್ಯಾಬ್ ಉದ್ಘಾಟನೆ- ಕಂಪ್ಯೂಟರ್ ಹಸ್ತಾಂತರ
ಕಾರ್ಕಳ: ಶಿಕ್ಷಣ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮುಂದಿನ ಔದ್ಯೋಗಿಕ ಉನ್ನತಿಗೆ ವಿವಿಧ ಕೌಶಲ್ಯದೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್, ರೊ. ರಾಜಾರಾಮ್ ಭಟ್ ಹೇಳಿದರು. ಅವರು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ, ಕಾಗ್ನಿಝೆಂಟ್ ಕಂಪನಿ ಹಾಗೂ ರೋಟರಿ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಹೆಲ್ಪ್ ಎಡ್ಯುಕೇಟ್’ ಕಾರ್ಯಕ್ರಮದಡಿಯಲ್ಲಿ ಕಾಲೇಜಿಗೆ ಕಾಗ್ನಿಝೆಂಟ್ ರವರು ಉಚಿತವಾಗಿ ನೀಡಿದ 20 ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ರಾಜ್ಯಾದ್ಯಂತ […]