ಕಾರ್ಕಳ: ಯುವತಿ ನಾಪತ್ತೆ

ಕಾರ್ಕಳ: ಕಾಲೇಜಿಗೆ ಹೋದ ಯುವತಿಯೊಬ್ಬಳು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟುವಿನಲ್ಲಿ ನಡೆದಿದೆ. ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟುವಿನ ಸುಪ್ರಿಯಾ (18) ನಾಪತ್ತೆಯಾದ ಯುವತಿ. ಈಕೆ ಡಿಸೆಂಬರ್ 15 ರಂದು ಮನೆಯಿಂದ ಕಾಲೇಜಿಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾಳೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ […]