ಕಾರ್ಕಳದ ಬೆಳ್ಮಣ್ ಸೇರಿದಂತೆ ಹಲವು ಕಡೆ ವಿದ್ಯುತ್ ನಿರಂತರ ಕಣ್ಣಾಮುಚ್ಚಾಲೆ: ಮೆಸ್ಕಾಂ ನ ಕಳಪೆ ವಿದ್ಯುತ್ ಸೇವೆ ವಿರುದ್ಧ ಹೋರಾಟದ ಎಚ್ಚರಿಕೆ!

ಕಾರ್ಕಳ: ತಾಲೂಕಿನಲ್ಲಿ ಬೆಳ್ಮಣ್, ನಂದಳಿಕೆ,ಸೂಡ,ಕೆದಿಂಜೆ, ಮುಲ್ಲಡ್ಕ, ಸಚ್ಚರಿಪೇಟೆ, ಬೋಳ, ನಿಟ್ಟೆ ಮೊದಲಾದ ಪ್ರದೇಶದಲ್ಲಿ ದಿನಕ್ಕೆ 20 ರಿಂದ 30 ಸಲ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದು ಮೆಸ್ಕಾಂ ತನ್ನ ಕಳಪೆ ಸೇವೆಗೆ ಮತ್ತೆ ಸುದ್ದಿಯಲ್ಲಿದೆ. ಈ ಭಾಗದಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಹೀಗೆ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಸ್ಥಳೀಯ ಮೆಸ್ಕಾಂ ಕೆಲಸಗಾರರು, ಕಾರ್ಕಳದ ಮೆಸ್ಕಾಂ ಅಧಿಕಾರಿಗಳ ಕರ್ತವ್ಯ, ಸೇವೆ ಎಷ್ಟೊಂದು ಕಳಪೆ ಮಟ್ಟದಲ್ಲಿದೆ ಎನ್ನುವುದನ್ನು ಈ ವ್ಯಾಪ್ತಿಯಲ್ಲಿನ ವಿದ್ಯುತ್ ನಿರ್ವಹಣೆ ನೋಡಿಯೇ ತಿಳಿಯಬೇಕು. […]