ಕಾರ್ಕಳ: ತೆಂಗಿನ ಮರ ಕಡಿಯುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತ್ಯು
ಕಾರ್ಕಳ: ಇಲ್ಲಿನ ಕಲ್ಲೊಟ್ಟೆ ಎಂಬಲ್ಲಿ ಇಂದು ತೆಂಗಿನ ಮರ ಕಡಿಯುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತನನ್ನು ಜೋಡುಕಟ್ಟೆ ನಿವಾಸಿ ವಾಸು (45) ಎಂದು ಗುರುತಿಸಲಾಗಿದೆ. ಈತ ಕಲ್ಲೊಟ್ಟೆಯಲ್ಲಿ ಇಂದು ತೆಂಗಿನ ಮರ ಕಡಿಯಲು ಮರ ಏರಿದ್ದ, ಈ ವೇಳೆ ತೆಂಗಿನ ಮರಕ್ಕೆ ತಾಗಿಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ವಾಸುವಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.