ಕಾರ್ಕಳ: ಬಾವಿಗೆ ಬಿದ್ದ ಲಾರಿ; ಚಾಲಕ ಪವಾಡ ಸದೃಶವಾಗಿ ಪಾರು
ಕಾರ್ಕಳ: ರಿವರ್ಸ್ ತೆಗೆಯುವ ವೇಳೆ ಲಾರಿಯೊಂದು ಬಾವಿಗೆ ಬಿದ್ದ ಘಟನೆ ಕಾರ್ಕಳ-ಮಂಗಳೂರು ರಸ್ತೆಯ ಭಾರತೀಯ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ಇದು ಕಾರ್ಕಳದ ಕೃಷಿ ಉತ್ಪನ್ನ ಮಾರುಕಟ್ಟೆಯ ಲಾರಿಯಾಗಿದೆ. ಮಂಗಳೂರಿನಿಂದ ಕಾರ್ಕಳಕ್ಕೆ ಗೊಬ್ಬರ ಹೇರಿಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಲಾರಿ ಚಾಲಕ ಹಿಂದೆ ತೆಗೆಯುವ ವೇಳೆ ಈ ದುರ್ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಲಾರಿಯೊಳಗಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.