ಪ್ರಾಥಮಿಕ ಶಾಲಾ ಶಿಕ್ಷಕರು ನೆನಪಿನಲ್ಲಿ ಉಳಿಯುವ ಅತ್ಯಮೂಲ್ಯ ವ್ಯಕ್ತಿಗಳು: ಡಾ. ಉದಯ್ ಕುಮಾರ್ ಶೆಟ್ಟಿ

ಕಾರ್ಕಳ: ಶಿಕ್ಷಣ ಕೇವಲ ಜ್ಞಾನ ನೀಡುವ ಉದ್ದೇಶವನ್ನು ಹೊಂದಿರದೆ ವಿದ್ಯಾರ್ಥಿಗಳಲ್ಲಿ ಮೌಲ್ಯವರ್ಧನೆ ಮಾಡುವ ಗುರಿಯನ್ನೂ ಹೊಂದಿದೆ. ಈ ಗುರಿಯನ್ನು ಸಾಕಾರಗೊಳಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ನಮ್ಮ ಮನದಾಳದಲ್ಲಿ ಸದಾ ಕಾಲ ನೆಲೆಯೂರುವ ಅತ್ಯಮೂಲ್ಯ ವ್ಯಕ್ತಿಗಳು. ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತೋಷ ನನಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಡಾ. ಉದಯ್ ಕುಮಾರ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು […]