ಕಾರ್ಕಳ ಕಾಂಗ್ರೆಸ್ ಸರ್ಕಾರಿ ಆಸ್ಪತ್ರೆಯ ವಿಚಾರವಾಗಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ: ನವೀನ್‌ ನಾಯಕ್‌

ಕಾರ್ಕಳ: ಒಬ್ಬ ಜನಪ್ರತಿನಿಧಿಯಾಗಿ ನಾಲ್ಕು ಬಾರಿ ಆಯ್ಕೆಯಾಗಿ ಜನ ಸೇವೆ ಮಾಡಿದ ಶಾಸಕರಿಗೆ, ಅಧಿಕಾರಗಳ ಸಭೆಯನ್ನು ಎಲ್ಲಿ ಯಾವಾಗ ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ, ಒಬ್ಬ ಗ್ರಾಮ ಪಂಚಾಯತ್ ಸದಸ್ಯನ ಅರ್ಹತೆಯೂ ಇಲ್ಲದ ಕಾಂಗ್ರೆಸ್ಸಿನ ಪ್ರತಿನಿಧಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ರಿವೀವ್ಯು ಸಭೆ ನಡೆಸಿದ ನಿಮ್ಮಂತವರಿಂದ ಪಾಠ ಕಲಿಯ ಬೇಕಾಗಿಲ್ಲ ಎಂದು ನವೀನ್‌ ನಾಯಕ್‌ ಹೇಳಿದರು. ಅಂದು ಕಾಂಗ್ರೆಸ್ಸಿನ ಸುಧೀರ್ಘ ಆಡಳಿತಾವಧಿಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಕಟ್ಟಡಗಳಿಲ್ಲದೆ, ಸ್ವಚ್ಛತೆಯು ಸಹ ಇಲ್ಲದೆ  […]