ಕೋವಿಡ್- 19 ಲ್ಯಾಬ್ ಗೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಿಂದ ತಾಂತ್ರಿಕ ಸಹಾಯ

ನಿಟ್ಟೆ: ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗವು ಕುಂದಾಪುರ ಮೂಲದ ಖಾಸಗಿ ಸಂಸ್ಥೆ ಗುತ್ತಿಗೆ ಪಡೆದಿರುವ ಕೋವಿಡ್ -19 ಟೆಸ್ಟಿಂಗ್ ಲ್ಯಾಬೋರೇಟರಿ ನಿಮಾ೯ಣಕ್ಕೆ ತಾಂತ್ರಿಕ ಸಹಾಯ ನೀಡಿದೆ. ಈ ಸಂಸ್ಥೆಯು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ, ಮಹಾರಾಷ್ಟ್ರದ ಜಾಲ್ನಾದ ಸಾರ್ವಜನಿಕ ಆಸ್ಪತ್ರೆ ಹಾಗು ಕರ್ನಾಟಕದ ಜಿಲ್ಲೆಯೊಂದರ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬೋರೇಟರಿಗಳನ್ನು ನಿಮಿ೯ಸಿದೆ. ಈ ಹಿಂದೆ ಇದೇ ಸಂಸ್ಥೆ ದೇಶಾದ್ಯಂತ ನಿರ್ಮಿಸಿದ ೨೦ಕ್ಕೂ ಹೆಚ್ಚು ಬಯೋಸೇಫ್ಟಿ ಲೆವೆಲ್-III ಲ್ಯಾಬೊರೇಟರಿಗಳ ವಿನ್ಯಾಸಕ್ಕೂ ನಿಟ್ಟೆ ತಾಂತ್ರಿಕ […]