ಬಿಎಸ್ಎನ್ಎಲ್ ನ್ನು ಜಿಯೋದೊಂದಿಗೆ ಲೀನಗೊಳಿಸುವ ಹುನ್ನಾರ ಕೇಂದ್ರ ಸರಕಾರದ್ದು :ಕಾರ್ಕಳ ಕಾಂಗ್ರೆಸ್ ಗರಂ

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಬಹುಪ್ರತಿಷ್ಠಿತ ಭಾರತ್ ಸಂಚಾರ ನಿಗಮವನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚುವ ಅಥವಾ ರಿಲಯನ್ಸ್ ಜಿಯೊದೊಂದಿಗೆ ಲೀನಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು, ಪರಿಣಾಮವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.  ಇದೊಂದು ಶತಮಾನದ ಮಹಾ ಮೋಸ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ ಚಂದ್ರಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಎಸ್‌ಎನ್‌ಎಲ್‌ನ್ನು ದುರ್ಬಲಗೊಳಿಸಿ, ಜಿಯೋವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವರೆಗೂ ೪ಜಿ ತರಂಗಾಂತರ ಹಂಚಿಕೆಯಲ್ಲಿ ಬಿಎಸ್‌ಎನ್‌ಎಲ್‌ ನ್ನು ವಂಚಿಸಲಾಗಿತ್ತು. […]