ಕಾರ್ಕಳ: ಕಾಂಗ್ರೆಸ್ ನಿಂದ ಸಾಮರಸ್ಯ ನಡಿಗೆ ಕಾರ್ಯಕ್ರಮ

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸಾಮರಸ್ಯ ನಡಿಗೆಯು ಗಾಂಧಿ ಮೈದಾನದಿಂದ ಬಸು ನಿಲ್ದಾಣದವರೆಗೆ ನಡೆಯಿತು. ಸಾಮರಸ್ಯ ನಡಿಗೆಯ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಅವರು ಪುಷ್ಪಮಾಲೆಯನ್ನು ಹಾಕಿ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು. ನಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾ ಡಿಸೋಜಾ ಮಾತನಾಡಿ, ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೆಜ್ಜೆ ಹಾಕಿದರು. ನಾವು ಕೂಡ ಬಿಜೆಪಿಯ ಅರಾಜಕತೆಯ ವಿರುದ್ಧ ಹೆಜ್ಜೆ ಹಾಕೋಣ […]