ಕಾರ್ಕಳದ ಬೋರ್ಡ್ ಹೈಸ್ಕೂಲಿನಲ್ಲಿ ನಿಯಮಾವಳಿ ಉಲ್ಲಂಘಿಸಿ ತರಗತಿ: ಹೊಣೆಗಾರಿಕೆಯಿಂದ ನುಣುಚಿಕೊಂಡ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕ
ಕಾರ್ಕಳ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಶಾಲಾ ಕಾಲೇಜುಗಳನ್ನು ನಡೆಸಬಾರದು ಎನ್ನುವ ನಿಯಮವಿದ್ರೂ ಕಾರ್ಕಳದ ಬೋರ್ಡ್ ಹೈಸ್ಕೂಲ್ ನ ಮುಖ್ಯ ಶಿಕ್ಷಕ ರಾಜಾರೋಷವಾಗಿ ತರಗತಿ ನಡೆಸಿದ್ದಾರೆ.ತನ್ನ ವ್ಯಾಪ್ತಿಯ ಸರಕಾರಿ ಶಾಲೆಯೊಂದರಲ್ಲಿ ಹೀಗೆ ಏಕಾಏಕಿ ತರಗತಿ ನಡೆಯುತ್ತಿದ್ದರೂ ಇಲ್ಲಿನ ತಾಲೂಕು ಶಿಕ್ಷಣಾಧಿಕಾರಿಗೆ ಈ ವಿಷಯವೇ ಗೊತ್ತಿಲ್ಲ. ಇದೀಗ ಈ ಘಟನೆ ಸಾರ್ವಜನಿಕವಾಗುತ್ತಿದ್ದಂತೆಯೇ ಮುಖ್ಯ ಶಿಕ್ಷಕ ಮುರಳಿ ಪ್ರಭು ಮತ್ತು ತಾಲೂಕು ಶಿಕ್ಷಣಾಧಿಕಾರಿ ಶಶಿಧರ್ ಜಿ ಎಸ್ ಪರಸ್ಪರ ದೂಷಣೆಯಲ್ಲಿ ತೊಡಗಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶುಕ್ರವಾರ ಮುಖ್ಯೋಪಾಧ್ಯಾಯರು […]