ಕಾರ್ಕಳ: ಆಟೊಗೆ ಕಾರು ಡಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಸಾವು
ಕಾರ್ಕಳ: ಇಲ್ಲಿನ ಮಿಯಾರು ಚರ್ಚ್ ಬಳಿ ಇಂದು ಬೆಳಿಗ್ಗೆ ಆಟೊ ರಿಕ್ಷಾ ಹಾಗೂ ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಮೃತಪಟ್ಟಿದ್ದು, ಆಟೊದಲ್ಲಿದ್ದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಆಟೊ ಚಾಲಕನನ್ನು 54 ವರ್ಷದ ಚಂದ್ರಶೇಖರ ಮಡಿವಾಳ ಎಂದು ಗುರುತಿಸಲಾಗಿದೆ. ಆಟೊದಲ್ಲಿದ್ದ ಪ್ರಯಾಣಿಕ ದಿವಾಕರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರಶೇಖರ್ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದರು. ಮಿಯಾರು ಚರ್ಚ್ ಬಳಿಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಬಜಗೋಳಿ […]