ಕಾರ್ಕಳ: ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರೂ. ವಂಚನೆ ಪ್ರಕರಣ: ಮೂವರು ಆರೋಪಿಗಳ ಬಂಧನ.
ಕಾರ್ಕಳ: ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ಪ್ರಕರಣವನ್ನು ಭೇದಿಸಿ ಮೂವರು ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು, ಮಹಾರಾಷ್ಟ್ರ ಸೋಲಾಪುರದ ಕೇದಾರನಾಥ ನಗರದ ಶ್ರವಣ್ ಸತೀಶ ಮಿನಜಗಿ(27), ಸೋಲಾಪುರ ತಾಲೂಕಿನ ಕುಮ್ಮಾನಗರದ ಇಂದಿರಾ ನಗರದ ಪ್ರದೀಪ ಮಾರುತಿ ಇಂಗ್ಲೆ(27), ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ವನಗಲ್ಲಿಯ ಕಿರಣ್ ಬಾಲು ಚೌಹಾನ್ (28). ನಾಲ್ಕನೆ ಆರೋಪಿ ಪತ್ತೆಗಾಗಿ ಅಜೆಕಾರು ಪೊಲೀಸರು ಬಲೆಬೀಸಿದ್ದಾರೆ. ಬಂಧಿತ ಮೂವರು […]