ಕಾರ್ಕಳ: ಕೃಷಿ ತೋಟಕ್ಕೆ ಅಳವಡಿಸಿರುವ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಾರ್ಕಳ: ಕೃಷಿ ತೋಟಕ್ಕೆ ಅಳವಡಿಸಿದ್ದ IBX ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ನಡೆದಿದೆ. ಮೃತರನ್ನು ಮಾಳ ಗ್ರಾಮದ ಕೂಡಬೆಟ್ಟು ಸೋಮನಾಥ ಡೋಂಗ್ರೆ ಎಂದು ಗುರುತಿಸಲಾಗಿದೆ. ಇವರು ಆಗಸ್ಟ್ 10ರಂದು ರಾತ್ರಿ ಸ್ನೇಹಿತರ ಮನೆಗೆ ಹೋಗುತ್ತಿದ್ದ ವೇಳೆ ವೆಂಕಟೇಶ ಜೋಷಿ ಅವರ ಕೃಷಿ ತೋಟಕ್ಕೆ ಅಳವಡಿಸಿರುವ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಈ ಘಟನೆಗೆ ವೆಂಕಟೇಶ ಜೋಷಿಯವರ ನಿರ್ಲಕ್ಷವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ […]