ಕಾರ್ಕಳ: ನಿವೃತ್ತ ಉಪನ್ಯಾಸಕ ಆತ್ಮಹತ್ಯೆಗೆ ಶರಣು

ಕಾರ್ಕಳ: ನಿವೃತ್ತ ಕಾಲೇಜು ಉಪನ್ಯಾಸಕರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ತೆಳ್ಳಾರು ಎಂಬಲ್ಲಿ ನಡೆದಿದೆ. ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ ತೆಳ್ಳಾರು 14ನೇ ಅಡ್ಡರಸ್ತೆಯ ಭಾಗೀರತಿ ನಿವಾಸದ ಟಿ. ಜಯರಂಗ ಭಟ್ (75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.