ಕಾರ್ಕಳ: ಫ್ಯಾನಿಗೆ ನೇಣುಬಿಗಿದುಕೊಂಡು ಕುಕ್ಕುಂದೂರು ನಿವಾಸಿ ಆತ್ಮಹತ್ಯೆ
ಕಾರ್ಕಳ: ಫ್ಯಾನಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಅಶ್ವತಪುರ ಎಂಬಲ್ಲಿ ಮಾ. 2ರಂದು ಬೆಳಕಿಗೆ ಬಂದಿದೆ. ಕುಕ್ಕುಂದೂರು ಗ್ರಾಮದ ಅಶ್ವತಪುರ ನಿವಾಸಿ ಚಂದ್ರಶೇಖರ್ ಎನ್. ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಪರೀತ ಕುಡಿತದ ಚಟ ಹೊಂದಿದ್ದ ಚಂದ್ರಶೇಖರ್, ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇದೇ ಖಿನ್ನತೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.