ಕಾರ್ಕಳ: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ
ಕಾರ್ಕಳ: ಉದ್ಯಮಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಹಿರ್ಗಾನ ಚಿಕ್ಕಲ್ ಬೆಟ್ಟುವಿನಲ್ಲಿ ನಡೆದಿದೆ. ಹಿರ್ಗಾನ ಚಿಕ್ಕಲ್ ಬೆಟ್ಟು ನಿವಾಸಿ ಸುನೀಲ್ ಶೆಟ್ಟಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಪುಣೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಣೆಯಿಂದ ಊರಿಗೆ ಮರಳಿದ್ದರು. ಎಂಟು ತಿಂಗಳಿಂದ ಮನೆಯಲ್ಲಿ ಇದ್ದ ಅವರು ನಿನ್ನೆ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ ಬಳಿಕ ಕೃಷಿ ತೋಟದಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ನಲಾಗಿದೆ. ವಿವಾಹಿತರಾಗಿರುವ ಅವರಿಗೆ ಪತ್ನಿ, […]