ಕಾರ್ಕಳ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿಯ ಅನೇಕ ಹಿರಿಯ ಮುಖಂಡರು ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಾಜೇಶ್ವರಿ ರವಿ ಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರಹಾಸ್ ಸುವರ್ಣ, ಮುನಿಯಾಲ್ ಬಿಲ್ಲವ ಸಂಘದ ಸ್ಥಾಪಾಕಾಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಆನಂದ ಪೂಜಾರಿ, ಉದ್ಯಮಿ ಕಾಂತಾವರ ಉದಯ್ ಶೆಟ್ಟಿ. ಕುಕ್ಕುಂದೂರು ಪಂಚಾಯತ್ ಸದಸ್ಯ ಹಾಗೂ ನ್ಯಾಯ ಸಮಿತಿ ಅಧ್ಯಕ್ಷ ರಮೇಶ್ ಮತ್ತು ಅನೇಕ ಗ್ರಾಮಗಳ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು […]
ಕಾರ್ಕಳ ಹಾಗೂ ಉಡುಪಿ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ; ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ 2022-23ನೇ ಸಾಲಿನ ದ್ವಿತೀಯ ಪಿ.ಯು.ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ಸ್ಮಯಾ ಸದಾನಂದ್ ಮಾಬೆನ್ ವಿಜ್ಞಾನ ವಿಭಾಗದಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ 3 ನೇ ರ‍್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾನ್ಯ ಜೈನ್ 594 ಅಂಕಗಳಿಸಿ ರಾಜ್ಯಕ್ಕೆ 4ನೇ ರ‍್ಯಾಂಕ್‌ಪಡೆದಿರುತ್ತಾರೆ. ಜ್ಞಾನಸುಧಾ ಸಂಸ್ಥೆಗಳ 16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ನೇ ರ‍್ಯಾಂಕಿನ ಒಳಗೆ ಸ್ಥಾನ ಪಡೆದಿರುತ್ತಾರೆ. ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದಲ್ಲಿಸ್ಮಯಾ ಸದಾನಂದ ಮಾಬೆನ್ 99%(594), ಎಂ.ಆರ್.ಯಶಸ್ ರೆಡ್ಡಿ […]
ಕಾರ್ಕಳ: ಮುಸ್ಲಿಂ ಧರ್ಮೀಯರಿಂದ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಕಾರ್ಕಳ: ಮುಸ್ಲಿಂ ಧರ್ಮೀಯರ ಪವಿತ್ರ ಈದ್ ಉಲ್ ಫಿತ್ರ್ ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಂದು ತಿಂಗಳುಗಳ ಕಾಲ ಪವಿತ್ರ ರಮ್ಜಾನ್ ಮಾಸದ ಉಪವಾಸ ಆಚರಣೆಯ ಬಳಿಕ ಶುಕ್ರವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ಇಂದು ಹಬ್ಬ ಆಚರಿಸಲಾಗುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ನಿನ್ನೆಯ ದಿನದಂದು ಹಬ್ಬವನ್ನು ಆಚರಿಸಲಾಯಿತು. ಕಾರ್ಕಳದಲ್ಲಿ ಇಂದು ಹಬ್ಬದ ಪ್ರಯುಕ್ತ ಮುಸ್ಲಿಮರಿಂದ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಲ್ಮರ ಈದ್ಗಾದಲ್ಲಿ ಸಾವಿರಾರು ಜನ ಮುಸ್ಲಿಮರು ಜಾಮಿಯಾ ಮಸೀದಿಯ ಗುರುಗಳಾದ ಮೌಲಾನ ಝಹೀರ್ ಅಹ್ಮದ್ […]
ಕಾರ್ಕಳ ಕ್ರಿಯೇಟಿವ್ ಪ.ಪೂ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ: ಕಾಲೇಜಿಗೆ ಒಟ್ಟು ಏಳು ರ‍್ಯಾಂಕ್

ಕಾರ್ಕಳ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 380 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರ‍್ಯಾಂಕ್ ಗಳಲ್ಲಿ ಏಳು ರ‍್ಯಾಂಕ್ ಗಳು ಕಾಲೇಜಿಗೆ ಸಂದಿವೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಸ್ತುತ್ ಪಟೇಲ್ 592 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್ […]
ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಜನರ ಮನ್ನಣೆಗೆ ಪಾತ್ರವಾಗಿದೆ: ಸುನಿಲ್ ಕುಮಾರ್

ಕಾರ್ಕಳ: ಸ್ವಚ್ಛ ಕಾರ್ಕಳದ ಪರಿಕಲ್ಪನೆ, 237 ಕಿಂಡಿ ಅಣೆಕಟ್ಟುಗಳ ಮೂಲಕ ಕೃಷಿಗೆ ಉತ್ತೇಜನ್, ಕೆಜೆ, ಟಿಟಿಐ ನರ್ಸಿಂಗ್ ಕಾಲೇಜುಗಳ ಮೂಲಕ ಶಿಕ್ಷಣಕ್ಕೆ ಒತ್ತು, ಪ್ರವಾಸೋದ್ಯಮಕ್ಕೆ ಉತ್ತೇಜನ, ಕರೋನಾ ಸಂಕಷ್ಟ ಕಾಲದಲ್ಲೂ ಸವಾಲುಗಳನ್ನು ಎದುರಿಸಿರುವುದು, ತಾಲೂಕಿನ ಸಂಪೂರ್ಣ ಅಭಿವೃದ್ದಿಯು ತನಗೆ ಶ್ರೀರಕ್ಷೆಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು. ಕಾರ್ಕಳದ ಜನತೆ ಬಿಜೆಪಿ ಆಡಳಿತವನ್ನು ಮೆಚ್ಚಿ ಬೆಂಬಲಿಸಿದ್ದಾರೆ. ಇಂದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವವರೂ ಬಿಜೆಪಿಯಿಂದ ಫಲಾನುಭವಿಯಾಗಿದ್ದವರು ಎಂದು ಅವರು ಹೇಳಿದರು. ಗ್ರಾಮಾಭಿವೃದ್ದಿಯಿಂದ ರಾಜ್ಯದ ಅಭಿವೃದ್ದಿ […]