ಕಾರ್ಕಳ: ಜಂಪ್ ರೋಪ್ ಪಂದ್ಯಾಟದಲ್ಲಿ ಚಿನ್ನ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಜ್ಞಾನಸುಧಾ ವಿದ್ಯಾರ್ಥಿಗಳು

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಶನಲ್ ಪಿ.ಯು ಕಾಲೇಜು ಬಾರ್ಕೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಜಂಪ್ ರೋಪ್ ಟೂರ್ನಾಮೆಂಟ್ ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 30 ಸೆಕೆಂಡ್ ಸ್ಪೀಡ್ ಡಬಲ್ ಅಂಡರ್ ಜಂಪ್ ರೋಪ್‌ನಲ್ಲಿ ವಿಶ್ವನಾಥ ಕೊಪ್ಪದ್ ಹಾಗೂ ಕು.ಚಿನ್ಮಯ್.ಎಸ್.ದೇಶಪಾಂಡೆ ಚಿನ್ನದ ಪದಕ, 3.ಮೀ.ಎಂಡೊರೆನ್ಸ್ ಜಂಪ್ ರೋಪ್‌ನಲ್ಲಿ ವಿಘ್ನೇಶ್ ಭಟ್ ಹಾಗೂ ಮಾನ್ಯ ಎಂ.ಎ ಚಿನ್ನದ ಪದಕ, […]
ನೀಟ್ ಮೊದಲ ಸುತ್ತಿನ ಆಯ್ಕೆಯಲ್ಲಿ ಜ್ಞಾನಸುಧಾ ಕಾಲೇಜಿನ 93 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಗೆ ಪ್ರವೇಶ

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್-2022ರ ಮೊದಲ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ ಜ್ಞಾನಸುಧಾ ಕಾಲೇಜಿನ 93 ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ವೈದ್ಯಕೀಯ ರಂಗದ ಶೈಕ್ಷಣಿಕ ಕ್ಷೇತ್ರ ಎನಿಸಿಕೊಂಡ ಕರಾವಳಿ ಭಾಗದ ಕೆ.ಎಂ.ಸಿ ಮಂಗಳೂರು ಹಾಗೂ ಕೆ.ಎಂ.ಸಿ ಮಣಿಪಾಲ, ಬಿ.ಎಂ.ಸಿ.ಬೆಂಗಳೂರು, ಎಂ.ಎಂ.ಸಿ. ಮೈಸೂರ್, ಕಿಮ್ಸ್ ಹುಬ್ಬಳ್ಳಿ, ಸಿಮ್ಸ್ ಶಿವಮೊಗ್ಗ ಸಹಿತ ಕರ್ನಾಟಕದ ವಿವಿಧ ಮೆಡಿಕಲ್ ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 93 ವಿದ್ಯಾರ್ಥಿಗಳಲ್ಲಿ 59 ಬಾಲಕ ಹಾಗೂ […]
ನಿಟ್ಟೆ ತಾಂತ್ರಿಕ ಕಾಲೇಜಿಗೆ ಇಪಿಎಫ್ ಸಂಸ್ಥೆಯಿಂದ ಪ್ರಶಂಸನಾ ಪ್ರಮಾಣಪತ್ರ

ನಿಟ್ಟೆ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಡಿಯಲ್ಲಿ ಬರುವ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯ ಉಡುಪಿ ಘಟಕವು ತಮ್ಮ ವಿಭಾಗದಡಿಯಲ್ಲಿ ದೊಡ್ಡ ಸಂಸ್ಥೆಗಳ ಪೈಕಿ ಇಪಿಎಫ್ ನ ನಿಬಂಧನೆಗಳು ಹಾಗೂ ಯೋಜನೆಗಳನ್ನು ಯಶಸ್ವಿಯಾಗಿಸುವಲ್ಲಿ ಉತ್ತಮಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವನ್ನು ಗುರುತಿಸಿ ಪ್ರಶಂಸನಾ ಪ್ರಮಾಣಪತ್ರ ನೀಡಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಉಡುಪಿ ಇಪಿಎಫ್ ಪ್ರಾದೇಶಿಕ ಕಛೇರಿಯ 70ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಮಾಣಪತ್ರವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ […]
ಪಟ್ಲ ಯು.ಎಸ್.ನಾಯಕ್ ಶಾಲಾ ವಿದ್ಯಾರ್ಥಿಗಳಿಗೆ ಬಾಲೋಪಚಾರ ಕೈಪಿಡಿ ವಿತರಣೆ

ಹಿರಿಯಡ್ಕ: ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಪ್ರಕಾಶಿತವಾದ ಆರೋಗ್ಯ ಭಾರತಿ ಕಾರ್ಕಳ ಇದರ ಅಧ್ಯಕ್ಷ ಮತ್ತು ಮೈಸೂರು ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಅವರು ಶಾಲಾ ಮಕ್ಕಳಿಗಾಗಿ ಬರೆದ ” ಬಾಲೋಪಾಚಾರ-ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಕೈಪಿಡಿಯನ್ನು ಪಟ್ಲದ ಯು.ಎಸ್.ನಾಯಕ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಇಂದು ಉಚಿತವಾಗಿ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಆರೋಗ್ಯ ಭಾರತಿಯ ಅಖಿಲ ಭಾರತ ಸ್ವಸ್ಥಗ್ರಾಮ ಪ್ರಮುಖ್ ಹಾಗೂ ಕಾರ್ಯಕಾರಣಿ ಸದಸ್ಯ, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವ ಜೀ […]
ನವೆಂಬರ್ 8 ರಿಂದ10 ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುವುದರಿಂದ ನವೆಂಬರ್ 8 ರಿಂದ 10 ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಕಚೇರಿ ಪ್ರಕಟಣೆ ತಿಳಿಸಿದೆ. ನವೆಂಬರ್ 8 ರಂದು 220/110/11ಕೆವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, 110/11 ಕೆವಿ ಬೆಳ್ಮಣ್ ಉಪಕೇಂದ್ರದಿಂದ ಹೊರಡುವ ಬೋಳ ಫೀಡರ್ ಹಾಗೂ 110/11 ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ ಪದವು ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಿಟ್ಟೆ, […]