ಹಿರಿಯಡಕ: ನ. 26 ರಂದು ವಾಯ್ಸ್ ಆಫ್ ಚಾಣಕ್ಯ 2022 ರ ಸೆಮಿಫೈನಲ್

ಹಿರಿಯಡಕ: ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ಸ್ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಿರಿಯಡಕ ರೈತರ ಸಹಕಾರಿ ಸಂಘ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕ ಇವರ ಸಹಯೋಗದೊಂದಿಗೆ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸಮರ್ಥ ಸೀಸನ್- 5 ರ ಸೆಮಿಫೈನಲ್ ನ. 26 ರಂದು ಬೆಳಿಗ್ಗೆ 9:30 ಕ್ಕೆ ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆ […]

ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ: ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕಾರ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಜಾನಪದ ಗೀತೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಕು.ಸಿಂಚನಾ.ವಿ.ನಾಯಕ್, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಕು.ವೈಷ್ಣವಿ ಶೆಟ್ಟಿ, ರಸಪ್ರಶ್ನೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಭರತ್ ಗೌಡ ಹಾಗೂ ಪ್ರಥಮ್ ಸ್ವರೂಪ್ ಪ್ರಥಮ ಸ್ಥಾನವನ್ನು ಹಾಗೂ ಇಂಗ್ಲಿಷ್ ಆಶುಭಾಷಣದಲ್ಲಿ ಪ್ರಥಮ ವಿಜ್ಞಾನ […]

ಕಾರ್ಕಳ: ನ.29 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ನುಡಿಹಬ್ಬ; ಡಾ. ಹಿರೇಮಗಳೂರು ಕಣ್ಣನ್ ಭಾಗಿ

ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29 ರಂದು ಬೆಳಗ್ಗೆ 10 ಗಂಟೆಯಿಂದ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನುಡಿಹಬ್ಬ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ, ಚಿಂತಕ ಡಾ. ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ. ಇಂಧನ ಸಚಿವ ವಿ.ಸುನಿಲ್ ಕುಮಾರ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಮಟ್ಟದ ಜಂಪ್ ರೋಪ್ ಸ್ಪರ್ಧೆ: ಜ್ಞಾನಸುಧಾ ವಿದ್ಯಾರ್ಥಿನಿ ಚಿನ್ಮಯಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಾರ್ಕಳ : ಕೊಪ್ಪಳದ ಶ್ರೀ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ಪದವಿ ಪೂರ್ವಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜರುಗಿದ ರಾಜ್ಯಮಟ್ಟದ ಜಂಪ್‌ರೋಪ್‌ ಕ್ರೀಡಾಸ್ಪರ್ಧೆಯಲ್ಲಿ 30 ಸೆಕೆಂಡ್ ಸ್ಪೀಡ್‌ ಡಬಲ್ ಅಂಡರ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಚಿನ್ಮಯಿ.ಎಸ್.ದೇಶ್‌ಪಾಂಡೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಈಕೆ ಶ್ರೀನಿವಾಸ್‌ ದೇಶ್‌ಪಾಂಡೆ ಹಾಗೂ ಮನಸ್ವಿನಿ.ಎಸ್.ದೇಶಪಾಂಡೆ ದಂಪತಿಗಳ ಸುಪುತ್ರಿ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆಯವರು ಮಾರ್ಗದರ್ಶನ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನುಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ ಟ್ರಸ್ಟ್ನ […]

ವಿದ್ಯೆಯನ್ನು ಇತರರ ಏಳಿಗೆಗೋಸ್ಕರ ಬಳಸಿ: ಮೌಲ್ಯ ಸುಧಾ ಕಾರ್ಯಕ್ರಮದಲ್ಲಿ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತೀ ಅಭಿಮತ

ಕಾರ್ಕಳ: ಮನುಷ್ಯನಿಗೆ ಯೌವ್ವನ, ಅಧಿಕಾರ, ಸಂಪತ್ತು, ಅವಿವೇಕ ಎಂಬ ನಾಲ್ಕು ಅಂಶಗಳಲ್ಲಿ ಒಂದು ಅಂಶ ಹೊಕ್ಕಿದರೂ ಆತ ಪತನಗೊಳ್ಳುತಾನೆ. ಅವಿವೇಕವನ್ನು ಹೊಂದಿದವನ ಬದುಕು ನಿರ್ನಾಮವಾಗುತ್ತದೆ. ವಿವೇಕಿಯಾದ ವ್ಯಕ್ತಿ ತನ್ನ ವಿದ್ಯೆಯನ್ನು ಜ್ಞಾನದಾನಕ್ಕಾಗಿ, ಇತರರ ಏಳಿಗೆಗೋಸ್ಕರ ಬಳಸುತ್ತಾನೆ ಎಂದು ತುಮಕೂರಿನ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತೀ ಮಹಾರಾಜ್ ಅಭಿಪ್ರಾಯಪಟ್ಟರು. ಅವರು ಶ್ರೀ ಮಹಾಗಣಪತಿ ದೇವಾಸ್ಥಾನ ಗಣಿತನಗರ ಮತ್ತು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ತಿಂಗಳ ಸರಣಿಯ ಕಾರ್ಯಕ್ರಮ ಮಾಲಿಕೆ […]