ದಿ. ಗೋಪಾಲ್ ಭಂಡಾರಿಯವರ ಕಛೇರಿಗೆ ಭೇಟಿ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಕಾರ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಲಪ್ರದರ್ಶನಕ್ಕೆ ತಾಲೀಮು ಆರಂಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕೆಪಿಸಿಸಿ ನೀಡಿರುವ ಬಿ ಫಾರಂ ಪಡೆದುಕೊಂಡು ಮುನ್ನೂರಕ್ಕೂ ಹೆಚ್ಚು ವಾಹನ ಜಾಥದ ಮೂಲಕ ಮುಂಡ್ಕೂರಿನಿಂದ ಬೆಳ್ಮಣ್, ನಿಟ್ಟೆ, ಕಾರ್ಕಳ, ಮಾರಿಗುಡಿ, ಗೊಮ್ಮಟ ಬೆಟ್ಟ ಮೂಲಕ ಸಾಗಿ ಕಾರ್ಕಳದ ತಾಲೂಕು ಕಛೇರಿ ಬಳಿ ಇರುವ ತಮ್ಮ ಕಚೇರಿಗೆ ತಲುಪಿದರು. ಬಳಿಕ ದಿ. ಗೋಪಾಲ್ ಭಂಡಾರಿಯವರ ಕಛೇರಿಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾದರು. ಈ ಸಂದರ್ಭದಲ್ಲಿ ಮಾತನಾಡಿದ […]
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಶೆಟ್ಟಿ ನೇಮಕ

ಕಾರ್ಕಳ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಮಾರ್ಗದರ್ಶನದಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೃಷ್ಣ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸದಾಶಿವ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುತೂಹಲದ ಕಣವಾದ ಕಾರ್ಕಳ ಚುನಾವಣಾ ಕ್ಷೇತ್ರ: ಕಾಂಗ್ರೆಸ್ ನಿಂದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕಣಕ್ಕೆ

ಕಾರ್ಕಳ: ಈ ಬಾರಿ ಕಾರ್ಕಳದ ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ. ಒಂದೆಡೆ ಬಿಜೆಪಿಯ ಸುನಿಲ್ ಕುಮಾರ್, ಮತ್ತೊಂದೆಡೆ ಶ್ರೀ ರಾಮ ಸೇನೆ ಯ ಪ್ರಮೋದ್ ಮುತಾಲಿಕ್ ಎದುರು ಬದುರಾಗಿದ್ದರೆ, ಇದೀಗ ಪ್ರತಿಪಕ್ಷ ಕಾಂಗ್ರೆಸ್ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿದೆ. ಈ ಬಾರಿ ಕಾರ್ಕಳದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಜಯ ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎನ್ನುವುದು ಮತ ಎಣಿಕೆಯ ದಿನದಂದು ಗೊತ್ತಾಗಲಿದೆ.
ರಂಗೇರಿದ ಚುನಾವಣಾ ಕಣ: ಮೊದಲ ದಿನ 4 ನಾಮಪತ್ರ ಸಲ್ಲಿಕೆ

ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಯ ಮೊದಲ ದಿನದಂದು ಜಿಲ್ಲೆಯಲ್ಲಿ ಒಟ್ಟು 4 ನಾಮಪತ್ರಗಳು ಸಲ್ಲಿಕೆಯಾಗಿದೆ. 119 ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಿರಣ್ ಕುಮಾರ್ ಕೊಡ್ಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ದಿನೇಶ್ ನಾಮಪತ್ರ ಸಲ್ಲಿಸಿರುತ್ತಾರೆ. 120 ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಮದಾಸ ಭಟ್ ನಾಮಪತ್ರ ಸಲ್ಲಿಸಿದ್ದಾರೆ. 122 ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ […]
ಅಜೆಕಾರು: ಏ.14 ರಂದು ನೂತನ ವಾಣಿಜ್ಯ ಸಂಕೀರ್ಣ “ಶಾಲೋಮ್ ಪ್ರಗತಿ” ಹಾಗೂ “ಕೆಮ್ಮಂಜೆ ಸೂಪರ್ ಮಾರ್ಕೆಟ್” ಉದ್ಘಾಟನೆ

ಅಜೆಕಾರು: ಕಾರ್ಕಳ ಅಜೆಕಾರು ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಾಣಿಜ್ಯ ಮತ್ತು ವಸತಿ ಸಂಕೀರ್ಣ “ಶಾಲೋಮ್ ಪ್ರಗತಿ” ಹಾಗೂ ಕೆಮ್ಮಂಜೆ ಸೂಪರ್ ಮಾರ್ಕೆಟ್” ಇದರ ಉದ್ಘಾಟನಾ ಸಮಾರಂಭವು ಏ.14 ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿರುವುದು. ಅಜೆಕಾರು ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್ ನ ಪ್ಯಾರಿಷ್ ಪ್ರೀಸ್ಟ್ ರೆ. ಫಾ ಪ್ರವೀಣ್ ಅಮೃತ್ ಮಾರ್ಟಿಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಲಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಶಿವರಾಮ ಜಿ.ಶೆಟ್ಟಿ ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಜೆಕಾರ್, […]