ಅಜೆಕಾರು: ಏ.14 ರಂದು ನೂತನ ವಾಣಿಜ್ಯ ಸಂಕೀರ್ಣ “ಶಾಲೋಮ್ ಪ್ರಗತಿ” ಹಾಗೂ “ಕೆಮ್ಮಂಜೆ ಸೂಪರ್ ಮಾರ್ಕೆಟ್” ಉದ್ಘಾಟನೆ

ಅಜೆಕಾರು: ಕಾರ್ಕಳ ಅಜೆಕಾರು ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಾಣಿಜ್ಯ ಮತ್ತು ವಸತಿ ಸಂಕೀರ್ಣ “ಶಾಲೋಮ್ ಪ್ರಗತಿ” ಹಾಗೂ ಕೆಮ್ಮಂಜೆ ಸೂಪರ್ ಮಾರ್ಕೆಟ್” ಇದರ ಉದ್ಘಾಟನಾ ಸಮಾರಂಭವು ಏ.14 ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿರುವುದು.

ಅಜೆಕಾರು ಸೇಕ್ರೆಡ್ ಹಾರ್ಟ್ ಜೀಸಸ್ ಚರ್ಚ್ ನ ಪ್ಯಾರಿಷ್ ಪ್ರೀಸ್ಟ್ ರೆ. ಫಾ ಪ್ರವೀಣ್ ಅಮೃತ್ ಮಾರ್ಟಿಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶೀರ್ವಚನ ನೀಡಲಿರುವರು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಶಿವರಾಮ ಜಿ.ಶೆಟ್ಟಿ ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಜೆಕಾರ್, ಮಹಾವೀರ ಹೆಗ್ಡೆ, ಆಡಳಿತ ಟ್ರಸ್ಟಿ ಕರಿಯಾಲು ಶ್ರೀ ವಿಟ್ಲ ದುರ್ಗಾಪರಮೇಶ್ವರಿ ದೇವಸ್ಥಾನ ಅಂಡರ್, ಅರುಣ್ ಭಟ್, ಶ್ರೀ ಜಯರಾಮ ಭಟ್ ಸಭಾಭವನ, ಎಣ್ಣೆಹೊಳೆ ಶೇಖ್ ಉಮ್ಮರ್ ಸಾಹೇಬ್ ಅಪ್ಸರಾ ಸಾರಿಗೆ, ಅಜೆಕಾರ್ ಕೃಷ್ಣ ಶೆಟ್ಟಿ, ಕೊಂಡಿಬೆಟ್ಟು ಡಾ.ಸುಧಾಕರ ಶೆಟ್ಟಿ, ಅಧ್ಯಕ್ಷ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್, ಗಣಿತನಗರ ಕುಕ್ಕುಂದೂರು ಸುಲೇಮಾನ್, ನ್ಯಾಷನಲ್ ಸೂಪರ್ ಬಜಾರ್, ತೀರ್ಥಹಳ್ಳಿ ಯಶವಂತ ಕೆ ಶೆಟ್ಟಿ, ಮುಂಬಯಿ ಶ್ರೀ ಜ್ಯೋತಿ ಪೂಜಾರಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಮರ್ಣೆ ಶ್ರೀ ಪ್ರೇಮಾನಂದ ಶೆಣೈ ಅಧ್ಯಕ್ಷರು, ಶ್ರೀ ರಾಮಮಂದಿರ ಟ್ರಸ್ಟ್, ಅಜೆಕಾರ್

ಆಗಮನ ಬಯಸುವ

ಧರ್ಮೇಂದ್ರ ರಾಮುಗ್ರಹ ರೈ ಪಾಲುದಾರ ಸುಜಯ ಶೆಟ್ಟಿ, ಮುನಿಯಾಲ್ ಪಾಲುದಾರ ಶಾಲೋಮ್ ಪ್ರಗತಿ, ಅಜೆಕಾರ್ ಪ್ರಕಟನೆ ತಿಳಿಸಿದೆ.