ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಕರಾವಳಿ ಯೂತ್ ಕ್ಲಬ್ ಗೆ ಗೌರವಾರ್ಪಣೆ
ಪಡುಬೆಳ್ಳೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕರಾವಳಿ ಯೂತ್ ಕ್ಲಬ್ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಗೌರವ ಪೂರ್ವಕವಾಗಿ ಸನ್ಮಾನ ಪತ್ರವನ್ನು ನೀಡಿ ಸಂಸ್ಥೆಯನ್ನು ಸನ್ಮಾನಿಸಲಾಯಿತು ಹಾಗೂ ಸಂಸ್ಥೆಗೆ 10000 ಹಣವನ್ನು ನೀಡಿ ಗೌರವಿಸಲಾಯಿತು. ಹಣವನ್ನು ಸಂಸ್ಥೆಯ ಮುಂದಿನ ತಿಂಗಳ ಸೇವಾ ಯೋಜನೆಯಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಕರಾವಳಿ ಯೂತ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.