ಕಾಪು ಸಮುದ್ರತೀರದಲ್ಲಿ ‘ಆನಂದ ಲಹರಿ’: ರವಿಶಂಕರ್ ಗುರೂಜಿ ಸತ್ಸಂಗದಲ್ಲಿ ಪುಳಕಗೊಂಡ ಭಕ್ತರು

ಕಾಪು: ಆರ್ಟ್ ಆಫ್ ಲಿವಿಂಗ್‌ (Art Of Living) ಸಂಸ್ಥಾಪಕ ರವಿಶಂಕರ್ ಗುರೂಜಿ (Ravishanakar Guruji) ಮಂಗಳವಾರದಂದು ಇಲ್ಲಿನ ಸಮುದ್ರ ತೀರದಲ್ಲಿ ‘ಆನಂದ ಲಹರಿ’ ಮಹಾಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ರವಿಶಂಕರ್ ಗುರೂಜಿ ಅವರು ವೇದಿಕೆ ಮೇಲೆರುತ್ತಿದ್ದಂತೆಯೇ ನೆರೆದವರು ಜಯ ಘೋಷ ಮೊಳಗಿಸಿದರು. ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲದ ಶೀರ, ಅವಲಕ್ಕಿ- ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು. ಜನಸಾಗರದ ನಡುವೆ ವೇದಿಕೆಯಲ್ಲಿ ಸಂಚರಿಸಿದ ರವಿಶಂಕರ್ ಗುರೂಜಿ ಅವರು ಜನರ ಭಕ್ತಿ ಭಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ […]

ಕಾಪು: ಖಾಯಂ ಶಿಕ್ಷಕರ ಬೇಡಿಕೆಯೊಡ್ಡಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಾಪು: ತಾಲೂಕಿನ ಬೆಳ್ಳಂಪಲ್ಲಿಯಲ್ಲಿರುವ ಜೈ ಹಿಂದ್ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 55 ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಗೆ ಖಾಯಂ ಶಿಕ್ಷಕರನ್ನು ನೀಡಬೇಕು ಎಂದು ಆಗ್ರಹಿಸಿ ಗುರುವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು. 1947 ರಲ್ಲಿ ಪ್ರಾರಂಭವಾದಾಗಿನಿಂದ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಲಾಗಿಲ್ಲ ಎಂದು ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಹೇಳಿದರು. ಕಳೆದ ಆರು ವರ್ಷಗಳಿಂದ, ತರಗತಿಗಳನ್ನು ನಡೆಸಲು ಹತ್ತಿರದ ಅನುದಾನಿತ ಶಾಲೆಯ ಶಿಕ್ಷಕರನ್ನು ವಾರಕೊಮ್ಮೆ ನಿಯೋಜಿಸಲಾಗುತ್ತಿದೆ. ಹದಿನೈದು ದಿನಗಳ […]

ಪ್ರಧಾನಿ ಮೋದಿ ಜನ್ಮದಿನ ನಿಮಿತ್ತ ಕಾಪು ಬಿಜೆಪಿ ವತಿಯಿಂದ ರಕ್ತದಾನ ಶಿಬಿರ

ಕಾಪು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ‌ ಭಾನುವಾರದಂದು ಕಾಪು ಬಿಜೆಪಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್ ನೆರವೇರಿಸಿದರು.‌ ಬಳಿಕ ಮಾತನಾಡಿದ ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ಮೋದಿ ಅವರ ಜನ್ಮ ದಿನದಿಂದ ಗಾಂಧಿ ಜಯಂತಿ ತನಕ ನಡೆಯುವ ಸೇವಾ ಪಾಕ್ಷಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಈ ಎಲ್ಲ ಸೇವಾ ಕಾರ್ಯಗಳ ಪುಣ್ಯದ […]

ಕಾಪು: ನೂತನ ಠಾಣಾಧಿಕಾರಿ ಅಬ್ದುಲ್ ಖಾದರ್ ಅವರಿಗೆ ಅಭಿನಂದನೆ

ಕಾಪು: ಕಾಪು ಪೊಲೀಸ್ ನೂತನ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ಖಾದರ್ ಇವರನ್ನು ಕಾಪು ಸಮಾಜ ಸೇವಾ ವೇದಿಕೆ ಪದಾಧಿಕಾರಿಗಳಾದ ಸಮಾಜ ಸೇವೆಯಲ್ಲಿ ರಾಷ್ಟ್ರಿಯ ಪ್ರಶಸ್ತಿ ಪಡೆದ ರೊ. ಫಾರೂಕ್ ಚಂದ್ರನಗರ, ರೊ. ದಿವಾಕರ ಬಿ ಶೆಟ್ಟಿ ಕಳತ್ತೂರು, ರೊ. ದಿವಾಕರ ಡಿ ಶೆಟ್ಟಿ ಅಭಿನಂದಿಸಿ ಸನ್ಮಾನಿಸಿದರು. ಕಾಪು ಕ್ರೈಂ ಠಾಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪುರುಷೋತ್ತಮ್ ಇವರನ್ನು ಕೂಡ ಅಭಿನಂದಿಸಿ ಸನ್ಮಾನಿಸಲಾಯಿತು.  

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯವೈಖರಿ ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಮಾಜಿ ಅಧ್ಯಕ್ಷ

ಕಾಪು: ಕೇಂದ್ರದಲ್ಲಿ ಅಸ್ಥಿತ್ವದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಅಭಿವೃದ್ದಿ ಪರ ಕಾಳಜಿಯಿಂದ ಹಾಗೂ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ನ ಬ್ಲಾಕ್ ದಕ್ಷಿಣ ವಲಯ ಉಪಾಧ್ಯಕ್ಷ ಹಾಗೂ ಕಟಪಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ , ಹಾಲಿ ಸದಸ್ಯ ಅಶೋಕ್ ರಾವ್ ಮತ್ತು ಕಟಪಾಡಿ ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತ ಸದಸ್ಯ ಕಾಪು ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಕಾಪು ಮಂಡಲ ಅಧ್ಯಕ್ಷ […]