ಕಾಪು: ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಗೆ ವಂಚನೆ; ದೂರು ದಾಖಲು
ಕಾಪು: ಪರಿಚಯಸ್ಥನಿಂದಲೇ ಮಹಿಳೆಯೊಬ್ಬರು ವಂಚನೆಗೊಳಗಾದ ಘಟನೆ ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಚ್ಚಿಲ ನಿವಾಸಿ ಮುಮ್ತಾಜ್ ವಂಚನೆಗೆ ಒಳಗಾದ ಮಹಿಳೆ. ಇವರಿಗೆ ಪರಿಚಯದವನಾದ ಆರೋಪಿ ಅನ್ವರ್ ಸಾಲ ಕೊಡಿಸುವುದಾಗಿ ಭರವಸೆ ನೀಡಿ, ಉಡುಪಿ ಉಜ್ವನ್ ಬ್ಯಾಂಕ್‌ನಲ್ಲಿ ಮುಮ್ತಾಜ್ ಅವರ ಬ್ಯಾಂಕ್ ಖಾತೆಯನ್ನು ತೆರೆಸಿದ್ದನು. ಮೊದಲೇ ತಿಳಿಸಿದ್ದಂತೆ 15,000 ರೂ. ಶುಲ್ಕ, ಸಾಲದ ಹಣ ಹಾಗೂ ದಾಖಲೆಗಳ ತಯಾರಿಕೆ ವೆಚ್ಚವನ್ನು ಮುಮ್ತಾಜ್ ಆತನಿಗೆ ನೀಡಿದ್ದರು. ಎಲ್ಲ ಹಣವನ್ನು ನೀಡಿ ಒಂದು ವಾರ ಆದರೂ ಮುಮ್ತಾಜ್ […]