ಕಾಪು ಬಿಜೆಪಿ ಮಹಾಶಕ್ತಿಕೇಂದ್ರಗಳ ಪದಾಧಿಕಾರಿಗಳ ಸಭೆ

ಕಾಪು: ಕಾಪು ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿಕೇಂದ್ರ ಪದಾಧಿಕಾರಿಗಳ ಸಭೆ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ಬಿಜೆಪಿ ಪಕ್ಷದಲ್ಲಿ ಇರುವಷ್ಟು ಸಂಘಟನಾತ್ಮಕ ವ್ಯವಸ್ಥೆ ಇತರ ಯಾವುದೇ ಪಕ್ಷದಲ್ಲಿ ಇಲ್ಲ. ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಅದರಲ್ಲಿ ಮಹಾಶಕ್ತಿಕೇಂದ್ರದ ಜವಾಬ್ದಾರಿ ಅತ್ಯಂತ ಮಹತ್ತರವಾದುದು. ಮಹಾಶಕ್ತಿಕೇಂದ್ರಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಸಂಘಟನೆ ಬಲಿಷ್ಠಗೊಳ್ಳುವುದು. ಪ್ರಾಮಾಣಿಕವಾಗಿ ಜವಾಬ್ದಾರಿಗೆ ನ್ಯಾಯ ಕೊಟ್ಟು ಪಕ್ಷ ಬೆಳೆಸೋಣ ಅದರೊಂದಿಗೆ ನಾವೂ ಬೆಳೆಯೋಣ ಎಂದರು. ಜಿಲ್ಲಾ […]