ಕಾಪು: ಮಲ್ಲಾರು ಜಾಮೀಯ ಮಸೀದಿಯ ಸದಸ್ಯನಿಗೆ ಮಾರಣಾಂತಿಕ ಹಲ್ಲೆ

ಕಾಪು: ಮಸೀದಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಪುವಿನ ಮಲ್ಲಾರು ಜಾಮೀಯ ಮಸೀದಿಯ ಸದಸ್ಯ ಮಹಮ್ಮದ್ ಹನೀಫ್ (55) ಎಂಬವರಿಗೆ ಐದು ಮಂದಿಯ ತಂಡ ಹಲ್ಲೆ ನಡೆಸಿದ ಘಟನೆ ಕಾಪು ಮಲ್ಲಾರು ಜಾಮೀಯ ಮಸೀದಿಯ ಹೊರಗಡೆ ನಡೆದಿದೆ. ಫೆ. 26ರಂದು ಮಧ್ಯಾಹ್ನ1.45ಕ್ಕೆ ಮಹಮ್ಮದ್ ಹನೀಫ್ ಎಂದಿನಂತೆ ಮಲ್ಲಾರು ಜಾಮೀಯ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹನೀಸ್, ಮಹಮ್ಮದ್ ಅಕ್ರಂ, ಮಹಮ್ಮದ್ ಆರೀಫ್, ಅಬಿದಾಲಿ […]