ಕಾಪು: ಹುಟ್ಟುಹಬ್ಬ ಆಚರಣೆ ವೇಳೆ ಚೂರಿ ಇರಿದು ಪರಾರಿ
ಕಾಪು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಜೀವ ಬೆದರಿಕೆಯೊಡ್ಡಿದ ಘಟನೆ ಕಾಪು ತಾಲೂಕಿನ ಕೋಟೆ ಗ್ರಾಮದ ಕಜಕೋಡ್ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶರತ್ ದೇವಾಡಿಗ ಎಂದು ಗುರುತಿಸಲಾಗಿದೆ. ಶರತ್ ಜೂನ್ 22ರಂದು ರಾತ್ರಿ 7.30ರ ಸುಮಾರಿಗೆ ಕಜಕೋಡ್ ಹೊಳೆಯ ಬದಿಯಲ್ಲಿ ಎಂಟು ಮಂದಿ ಸ್ನೇಹಿತ ಜೊತೆಗೂಡಿ ಸುಕೇಶ್ ಮೆಂಡನ್ ಎಂಬ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಈ ವೇಳೆ ಅಭಿಷೇಕ್ ಎಂಬಾತ ಶರತ್ ನಿಗೆ ಕರೆ ಮಾಡಿದ್ದನು. ಆದರೆ ಶರತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕಾರಣ […]