ಕಲಾವಿದ ಸತೀಶ್ಚಂದ್ರ ಅವರ ಕುಂಚದಿಂದ ಮೂಡಿಬಂತು ಕಾಂತಾರದ ಪಂಜುರ್ಲಿ ದೈವ!

ಮಣಿಪಾಲ: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ಮಾಡಿದ ಭೂತಾರಾಧನೆ ಕುರಿತ ಕಾಂತಾರ ಚಿತ್ರದ ಪಂಜುರ್ಲಿ ದೈವದ ಅಕ್ರಿಲಿಕ್ ಚಿತ್ರವನ್ನು ಮಣಿಪಾಲದ ಕಲಾವಿದ ಸತೀಶ್ಚಂದ್ರ ಅವರು ಅದ್ಭುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ದೈವದ ಕಾಲಿನ ಗಗ್ಗರ ಇವರ ಕೈ ಚಳಕದ ಸ್ವಂತ ರಚನೆಯಾಗಿದೆ. ಸತೀಶ್ಚಂದ್ರ ಲಯನ್ಸ್ ಸಂಸ್ಥೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ತರಂಗ ವಾರಪತ್ರಿಕೆಯಲ್ಲಿ ಇವರ ಚಿತ್ರಗಳು ಪ್ರಕಟವಾಗುತ್ತಿರುತ್ತವೆ.

ಕಾಂತಾರ ಕಂಡು ಆನಂದಿಸಿದ ಕೋಟ ಶ್ರೀನಿವಾಸ ಪೂಜಾರಿ: ರಿಷಭ್ ಶೆಟ್ಟಿಗೆ ಅಭಿನಂದನೆ ಎಂದ ಸಚಿವರು                                                 

  ಕೋಟ:   ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರು ಗುರುವಾರ ದೈವ ನರ್ತಕರು, ಕಲಾವಿದರು ಹಾಗೂ ದೈವ ಪಾತ್ರಿಗಳ ಜೊತೆಯಲ್ಲಿ ಕಾಂತಾರ ಚಲನಚಿತ್ರವನ್ನು ವೀ ಕ್ಷಿಸಿದರು. ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರುವ, ಜನರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಕರಾವಳಿಯ ಜೀವನಾಡಿಯ ಕಾಂತಾರ ಚಲನಚಿತ್ರವನ್ನು ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ ಸಚಿವರು ನೋಡಿದರು. ಈ ಸಂದರ್ಭದಲ್ಲಿ ಚಲನಚಿತ್ರ ನೋಡಲು ಆಗಮಿಸಿದ್ದ ದೈವ ನರ್ತಕರನ್ನು ಹಾಗೂ ಚಲನಚಿತ್ರದಲ್ಲಿ ಭಾಗವಹಿಸಿ ಪಾತ್ರ ನಿರ್ವಹಣೆ […]

ಹೊಂಬಾಳೆ ಫಿಲಮ್ಸ್ ನಿರ್ಮಾಣಗಳ ಪೈಕಿ ಅತಿ ಹೆಚ್ಚು ಜನ ವೀಕ್ಷಿಸಿದ ಚಿತ್ರ ಕಾಂತಾರ: ಕೆ.ಜಿ.ಎಫ್ ದಾಖಲೆ ಧೂಳೀಪಟ!!

ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ.. ಈ ರೀತಿಯಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮಧ್ಯೆ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ತಮಿಳು ಚಿತ್ರರಂಗದ ದಿಗ್ಗಜ ತಲೈವಾ ರಜನಿಕಾಂತ್ ಕೂಡಾ ಕಾಂತಾರ ಕಂಡು ತಮ್ಮ ಮೆಚ್ಚುಗೆ […]

ಕಾಂತಾರ ವೀಕ್ಷಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರಿವಾರ

ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಮಂಗಳೂರಿನ ಚಲನಚಿತ್ರ ಮಂದಿರದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ರಿಷಬ್ ಶೆಟ್ಟಿ ಅಭಿಯನದ ಕಾಂತಾರ ಚಿತ್ರ ವೀಕ್ಷಣೆ ಮಾಡಿದರು. ಕಾಂತಾರ ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಗ್ಗಡೆಯವರು ಚಿತ್ರದ ತಮ್ಮ ಅನುಭವವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಚಲನಚಿತ್ರ ನೋಡುವುದು ಕಡಿಮೆಯಾಗಿತ್ತು. ಕರ್ನಾಟಕದ ಒಂದು ಭಾಗದ ವಿಶೇಷ ಅನುಭವಗಳು, ನಂಬಿಕೆ, ನಡವಳಿಕೆಗಳು ಮತ್ತು ದೈವಾರಾಧನೆಯಲ್ಲಿರುವ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ರಿಷಭ್ ಶೆಟ್ಟಿ ಈ ಚಿತ್ರದಲ್ಲಿ […]

ಮರಳಿನಲ್ಲಿ ಮೂಡಿಬಂತು ದೈವಕಳೆ: ಸ್ಯಾಂಡ್ ಥೀಮ್ ತಂಡದಿಂದ ಕಾಂತಾರ ಶಿಲ್ಪಕಲೆ

ಕುಂದಾಪುರ: ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್ ಅವರ ‘ಸ್ಯಾಂಡ್ ಥೀಮ್’ ತಂಡವು ವರಾಹರೂಪಿ ಪಂಜುರ್ಲಿ ದೈವ ಮತ್ತು ಕಾಂತಾರದಲ್ಲಿ ಪಂಜುರ್ಲಿ ದೈವದ ರೂಪ ಧರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದೆ. ಕೋಡಿ ಕುಂದಾಪುರ ಹಳೇ ಆಳಿವೆ ಬೀಚ್‌ನಲ್ಲಿ ಕಾಂತಾರ ಚಿತ್ರದ ಪಂಜುರ್ಲಿ ದೈವದ ಮರಳು ಶಿಲ್ಪವು ಜನರನ್ನು ಕೈ ಬೀಸಿ ಕರೆದಿದೆ ಮಾತ್ರವಲ್ಲ ಕಲಾವಿದರ ಕೈ ಚಳಕಕ್ಕೆ ತಲೆ ಬಾಗಿದೆ.