ವರಾಹರೂಪಂ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಜರ್ಮನಿಯ ನೇತ್ರಹೀನ ಕುವರಿ ಕ್ಯಾಸ್ಮೇ
ಕ್ಯಾಸ್ಮೇ ಎನ್ನುವ ವಿದೇಶೀ ಹುಡುಗಿಯೊಬ್ಬರು ಕಾಂತಾರದ ವರಾಹರೂಪಂ ಹಾಡನ್ನು ಹಾಡುವ ಮೂಲಕ ನೆಟ್ಟಿಗರ ಅಚ್ಚರಿಗೆ ಕಾರಣರಾಗಿದ್ದಾರೆ. “ನಿಮ್ಮಲ್ಲಿ ಹಲವರು ನಾನು ಕನ್ನಡದಲ್ಲಿ ಹಾಡಬೇಕೆಂದು ಬಯಸಿದ್ದರು, ಈ ಬಾರಿ ನಾನು ಸಾಹಿತ್ಯವನ್ನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ” ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿಕೊಂಡಿರುವ ಇವರು ವರಾಹರೂಪಂ ಹಾಡನ್ನು ಹಾಡಿದ್ದಾರೆ. https://www.instagram.com/reel/Ck0sRJ9MAad/?igshid=YmMyMTA2M2Y%3D 19 ವರ್ಷದ ನೇತ್ರಹೀನ ಹಾಡುಗಾರ್ತಿ ಮೂಲತಃ ಜರ್ಮನಿಯವರು. ಕ್ಯಾಸ್ಮೇ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಭಾರತೀಯ ಭಾಷೆಗಳ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವರ ಇನ್ಸ್ಟಾಗ್ರಾಂ ಪ್ರೊಫೈಲ್ […]
ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ
ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಅರ್ಧ ಶತಕ ಬಾರಿಸಿದ ಕಾಂತಾರ: ಪಂಜುರ್ಲಿ ಮತ್ತು ಗುಳಿಗ ದೈವದ ಆಶೀರ್ವಾದವೆಂದ ರಿಷಬ್ ಶೆಟ್ಟಿ
ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ […]
ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕೈಯಲ್ಲಿ ಮೂಡಿದ ಪಂಜುರ್ಲಿ ದೈವ
ಬೆಂಗಳೂರು: ಇಲ್ಲಿನ ಕ್ರೈಸ್ಟ್ ಯುನಿವರ್ಸಿಟಿಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿರುವ ಕಾಂತಾರದ ಪಂಜುರ್ಲಿ ದೈವ ನೋಡುಗರ ಮನವನ್ನು ಸೂರೆಗೈದಿದೆ. Exhilarating experience to create Kantara Live Art in front of a massive college audience! @shetty_rishab @hombalefilms #Kantara #Liveart #Bhootakola #Mangalore #Karnataka #India #Culture #Movies #Rishabshetty #Hombale #VilasNayak #Painting #ChristCollege #ChristUniversity pic.twitter.com/Ve0epb8U5y — Vilas Nayak (@VilasNayak) November […]
ಸಕುಟುಂಬ ಸಮೇತರಾಗಿ ಕಾಣಿಸಿಕೊಂಡ ರಿಷಭ್ ಶೆಟ್ಟಿ: ಶುಭ ಹಾರೈಸಿದ ಅಭಿಮಾನಿಗಳು
ಕರಾವಳಿಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಭ್ ಶೆಟ್ಟಿಯವರು ಇದೆ ಮೊದಲ ಬಾರಿಗೆ ಸಕುಟುಂಬ ಸಮೇತರಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ, ಮಗ ರನ್ವಿತ್ ಶೆಟ್ಟಿ ಮತ್ತು ಮಗಳು ರಾಧ್ಯ ಶೆಟ್ಟಿ ಜೊತೆ ಇರುವ ತಮ್ಮ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ರಿಷಭ್ ಶೆಟ್ಟಿ ಅವರ ಪರಿವಾರವನ್ನು ಕಂಡ ನೆಟ್ಟಿಗರು ಸಂತೋಷ ವ್ಯಕ್ತ ಪಡಿಸಿ ಕಾಂತಾರ ಯಶಸ್ಸಿಗಾಗಿ ಶುಭಹಾರೈಸಿದ್ದಾರೆ. ಇದಕ್ಕೂ ಕೆಲದಿನಗಳ ಮುನ್ನ ತಮ್ಮ ಮಗಳು ರಾಧ್ಯ ಜೊತೆ ಇರುವ ಮುದ್ದಾದ […]