ಕನ್ನರ್ಪಾಡಿ ಶ್ರೀ ಜಯ ದುರ್ಗಾಪರಮೇಶ್ವರೀ ದೇವಸ್ಥಾನ: ಕೋಟಿ ಕುಂಕುಮಾರ್ಚನೆ ಮಂಗಲ

ಉಡುಪಿ: ಕನ್ನರ್ಪಾಡಿ ಶ್ರೀ ಜಯ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕದ ಅಂಗವಾಗಿ ಪುತ್ತೂರು ವೇ.ಮೂ. ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರ ಕೋಟಿ ಕುಂಕುಮಾರ್ಚನೆ ಸೇವೆಯ ಮಂಗಲೋತ್ಸವವು ನೆರವೇರಿತು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಹಾಲು ಪಾಯಸ ಸಹಿತ ಅನ್ನಪ್ರಸಾದ ಸ್ವೀಕರಿಸಿದ್ದು, ಸಂಜೆ ಧಾರ್ಮಿಕ ಸಭೆ ನಡೆಯಿತು. ಮಧ್ಯಾಹ್ನ ಭಕ್ತಿ ಸಂಗೀತ, ಸಂಜೆ ತಾಳಮದ್ದಲೆ, ರಾತ್ರಿ ತುಳು ನಾಟಕ ಪ್ರದರ್ಶನ ಜರಗಿತು. ದೇಗುಲದ ಆಡಳಿತಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. […]