ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ‘ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ’

ಉಡುಪಿ: ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಪ್ರಥಮ ಬಾರಿಗೆ ” ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ ” ಕಾರ್ಯಕ್ರಮವು ನಡೆಯಿತು. ಕನ್ನರ್ಪಾಡಿ ಜಯದುರ್ಗೆಗೆ ನಮಿಸಿ, ಮುಂಜಾನೆ 5.45ಕ್ಕೆ ಪಾದಯಾತ್ರೆ ಆರಂಭಗೊಂಡು ಉದ್ಯಾವರ, ಕಟಪಾಡಿ ಮಾರ್ಗವಾಗಿ ಕಾಲುನಡಿಗೆಯಲ್ಲಿ ವಲಯದ 36 ಉತ್ಸಾಹಿ ಸದಸ್ಯರು ಮತ್ತು ಇತರ ವಲಯದ ಸದಸ್ಯರು ಕುಂಜಾರುಗಿರಿಗೆ ಪಯಣಿಸಿ, 8.15 ರ ಹೊತ್ತಿಗೆ ಕುಂಜಾರುಗಿರಿಯ ಮೆಟ್ಟಿಲನ್ನೇರಿ ಕುಂಜಾರಮ್ಮನಿಗೆ ದರ್ಶನಗೈದರು. ಭಕ್ತರನ್ನು ಅದಮಾರು ಮಠದ ವತಿಯಿಂದ ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎನ್.ರಾಜೇಂದ್ರ , ಕಾರ್ಯದರ್ಶಿ ಎಂ.ಸುರೇಶ್ ರಾವ್, […]

ಕನ್ನರಪಾಡಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ

ಉಡುಪಿ: ಕಿನ್ನಿಮೂಲ್ಕಿ ಕನ್ನರಪಾಡಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಇತ್ತೀಚಿಗೆ ಶ್ರೀದೇವಿ ಸಭಾ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ರಮೇಶ ರಾವ್ ಬೀಡು ಹಾಗೂ ವಾಯುಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್ ಶಿವರಾಮ ಮಂಜ ಇವರು ಭಾಗವಹಿಸಿದ್ದರು.   ಈ ಬಾರಿಯ ಎಸ್ ಎಸ್ ಎಲ್ ಸಿ , ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧನೆ ಮಾಡಿ, ವಿವಿ ಪ್ರಶಸ್ತಿ ಪಡೆದ ಸಂಘದ ಸದಸ್ಯೆಯರಾದ ಉಷಾ ಚಡಗ ಮತ್ತು […]

ಕನ್ನರ್ಪಾಡಿ: ಆಗಸ್ಟ್ 31ರಿಂದ ಸೆಪ್ಟೆಂಬರ್ 4 ರವರೆಗೆ ಹದಿನೇಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕಿನ್ನಿಮೂಲ್ಕಿ: ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಹದಿನೇಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆಗಸ್ಟ್ 31 ಬುಧವಾರದಿಂದ ಸೆಪ್ಟೆಂಬರ್ 4 ರವಿವಾರದವರೆಗೆ ರಾ.ಹೆ 66 ಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದ ಬಳಿ ಜರುಗಲಿರುವುದು.  

ಮೇ 29: ಕನ್ನರ್ಪಾಡಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮ

ಉಡುಪಿ: ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್ ಉಡುಪಿ ಹಾಗೂ ಕಡೆಕಾರ್ ಗ್ರಾಮ ಪಂಚಾಯತ್ ಇವರ ಜಂಟಿ ಆಶ್ರಯದಲ್ಲಿ  ಡಾ. ಬಿ.ಆರ್  ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭವು ಮೇ 29 ರಂದು ಬೆಳಗ್ಗೆ 11.30 ಕ್ಕೆ ಕನ್ನರ್ಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅಂಬೇಡ್ಕರ್ ಭವನದ ಉದ್ಘಾಟನೆ ನೆರವೇರಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ […]