ಈ ಚಿತ್ರ ನೋಡಿದರೆ ನೀವು ಕಲಿತ ಕನ್ನಡ ಶಾಲೆ ಗ್ಯಾರಂಟಿ ಕಾಡುತ್ತೆ: ಬಾಲ್ಯ ಬಿಚ್ಚಿಡುವ “ಕಲ್ಪವೃಕ್ಷ”

*ಉಡುಪಿ Xpress ವಿಶೇಷ ಹಲವು ವರ್ಷಗಳ ಹಿಂದಿನ ಕನ್ನಡ ಶಾಲೆಗಳ ಚಿತ್ರಣ ಪ್ರಸ್ತುತ ಸಂಪೂರ್ಣ ಬದಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕನ್ನಡ ಶಾಲೆ ಪ್ರೇಮಿಗಳು ಕನ್ನಡ ಶಾಲೆ ಕಥೆ ಹೇಳುವ ‘ಕಲ್ಪವೃಕ್ಷ’ ಎಂಬ ಸೊಗಸಾದ ಕಿರುಚಿತ್ರ ನಿರ್ಮಿಸಿದ್ದಾರೆ. ಸದ್ಯ ಯೂಟ್ಯೂಬ್‌ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಗೊಂಡಿದೆ.  ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಬೇಕು ಎಂಬ ಉದ್ದೇಶದೊಂದಿಗೆ ಪೂರ್ಣಪ್ರಜ್ಞಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಅವರ ಪರಿಕಲ್ಪನೆಯೊಂದಿಗೆ ಮೂಡಿ ಬಂದಿರುವ ಚಿತ್ರ ಇದಾಗಿದೆ. 15:29 ನಿಮಿಷ […]