ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಪ್ರಾಯೋಜಕತ್ವದಲ್ಲಿ ರೋಟರಿ ವಲಯ-4 ಮತ್ತು ಪಟ್ಲ ಯು ಎಸ್ ನಾಯಕ್ ಶಾಲಾ ಮಕ್ಕಳೊಂದಿಗೆ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪಿ. ರಬೀಂದ್ರ ನಾಯಕ್ ಶತವರ್ಷ ಸಂಸ್ಕರಣೆಯ ಅಂಗವಾಗಿ ಶಾಲೆಯ ಮಕ್ಕಳ ಪ್ರಯಾಣಕ್ಕೆ ರೋ. ಪಿ. ಗಣೇಶ್ ನಾಯಕ್‌ ಅವರು ಶಾಲೆಗೆ 23.00 ಲಕ್ಷ ರೂ ನ ಬಸ್ಸ್ ಅನ್ನು ಕೊಡುಗೆಯಾಗಿ ಹಸ್ತಾಂತರ ಮಾಡಲಿದ್ದಾರೆ. ನವೆಂಬರ್ 1 ರಂದು ಬೆಳಿಗ್ಗೆ 9:30 ರಿಂದ 11.30ರವರೆಗೆ ಯು.ಯಸ್.ನಾಯಕ್ […]

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯಿಂದ ಕೋಟಿ ಕಂಠ ಗಾಯನ

ಉಪ್ಪೂರು: 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಸಮಸ್ತ ಕನ್ನಡಿಗರ ಒಕ್ಕೊರಳ ಹಾಡಿಗೆ ಸಂಸ್ಥೆಯ ವತಿಯಿಂದ ಧ್ವನಿಗೂಡಿಸಿ ಕನ್ನಡಾಂಬೆಗೆ ನಮನ ಸಲ್ಲಿಸಲಾಯಿತು.

ಮಣಿಪಾಲ: ಡಾ. ವಿ‌.ಎಸ್.ಆಚಾರ್ಯ ಪುತ್ಥಳಿ ಬಳಿ “ಕೋಟಿ ಕಂಠ ಗಾಯನ”

ಮಣಿಪಾಲ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ‌ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.28ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ “ಕೋಟಿ ಕಂಠ ಗಾಯನ” ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವಿನೂತನ ರೀತಿಯಲ್ಲಿ ಭಾಗವಹಿಸಲಿದೆ. ಅ.28 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮಣಿಪಾಲದ ರಜತಾದ್ರಿ ಬಳಿ ಇರುವ ಡಾ. ವಿ.ಎಸ್. ಆಚಾರ್ಯರವರ ಪುತ್ಥಳಿಯ ಬಳಿ ಸುಮಾರು 500 ಮಂದಿ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸೇರಿ ‘ಕನ್ನಡ ಶಾಲು ಮತ್ತು […]

ರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಕನ್ನಡ ಗೀತೆ ಸ್ಪರ್ಧೆ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲೆಯ 5 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ನವೆಂಬರ್ 1 ರಂದು ಮಧ್ಯಾಹ್ನ 1.30 ಕ್ಕೆ ನಗರದ ಬ್ರಹ್ಮಗಿರಿ ಜಿಲ್ಲಾ ಬಾಲಭವನದಲ್ಲಿ ಕನ್ನಡ ಗೀತೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಕನ್ನಡ ನಾಡಿನ ಕವಿ, ಸಾಹಿತಿಗಳಿಂದ ರಚಿಸಲ್ಪಟ್ಟ ಕನ್ನಡ ನಾಡಿಗೆ ಸಂಬಂಧಿಸಿದ ಸುಗಮ ಸಂಗೀತ ಹಾಗೂ ಸಿನಿಮಾ ಗೀತೆಗಳನ್ನು ಹಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2574972 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು […]