ರಾಜ್ ಕುಟುಂಬದಿಂದ ‘ಪರಮಾತ್ಮ’ನ ಸ್ಮಾರಕ ನಿರ್ಮಾಣ : ಅಪ್ಪು ನಮ್ಮನ್ನಗಲಿ 2 ವರ್ಷ
ಕನ್ನಡ ಚಿತ್ರರಂಗದ ದೊಡ್ಮನೆಯ ರಾಜಕುಮಾರ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ನಾಳೆಗೆ (ಅ.29) ಎರಡು ವರ್ಷ. ನಾಳೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆ ಕಂಠೀರ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕ ಸಿಂಗಾರಗೊಳ್ಳುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ದೊಡ್ಮನೆ ಕುಟುಂಬ ಡಾ.ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಸ್ಮಾರಕದ ಬಳಿಯೇ ಪುನೀತ್ ರಾಜ್ಕುಮಾರ್ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಬಿಳಿ ಮಾರ್ಬಲ್ಸ್ನಲ್ಲಿ ಅಪ್ಪು ಸಮಾಧಿಯನ್ನು ಕಟ್ಟಲಾಗಿದ್ದು, ಅದರ ಮೇಲೆ ‘ರಾಜಕುಮಾರ’ನ ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲೂ ಬಿಳಿ ಬಣ್ಣದ […]