ಶ್ರೀ ಕೃಷ್ಣಮಠದ ಆಶ್ರಯದಲ್ಲಿ 536 ನೇ ಕನಕದಾಸ ಜಯಂತಿ ಆಚರಣೆ
ಉಡುಪಿ: ಉಡುಪಿ ಜಿಲ್ಲಾ ಶ್ರೀಕನಕದಾಸ ಸಮಾಜ ಸಂಘ(ರಿ) ಉಡುಪಿ ಇವರ ಸಹಯೋಗದಲ್ಲಿ ಭಕ್ತ ಕನಕದಾಸರ 536 ನೇ ಜಯಂತಿ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮಿಜಿಗಳು ಉದ್ಘಾಟಿಸಿ, ಪಾಳೇಗಾರರಾಗಿದ್ದ ತಿಮ್ಮಪ್ಪ ನಾಯಕ ಲೌಕಿಕ ಸುಖಗಳನ್ನು ತೊರೆದು ದೇವರ ದಾಸರಾಗಿ ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ತತ್ವಜ್ಞಾನಿ ಭಕ್ತಕನಕದಾಸರು ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದು ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿಯ ಶ್ರೀಕೃಷ್ಣನ ಭಕ್ತರು ಎಂದು ಅನುಗ್ರಹ ಸಂದೇಶ ನೀಡಿದರು. ಸಭೆಯಲ್ಲಿ ಸಮಾಜದ […]
ಕನಕದಾಸರ ರಚನೆಗಳು ಸಹಬಾಳ್ವೆಯ ಸಂದೇಶ ಸಾರುವ ದಾರಿದೀಪಗಳು: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್
ಉಡುಪಿ: ಕನಕದಾಸರು ರಚಿಸಿರುವ ಕೃತಿಗಳು ಮತ್ತು ಅವರು ನೀಡಿರುವ ಸಂದೇಶಗಳು ಮಾನವ ಸಮಾಜದಲ್ಲಿ ಸಮಾನತೆ ಮೂಡಲು ಮತ್ತು ಸಹಬಾಳ್ವೆಯಿಂದ ಬಾಳಲು ಅಗತ್ಯವಿರುವ ಸಂದೇಶವನ್ನು ಸಾರುತ್ತವೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಯೋಗದಲ್ಲಿ ನಡೆದ ಭಕ್ತ ಕನಕದಾಸ ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳುಗಳ […]