ಜನವರಿ ಕೊನೆಯಲ್ಲಿ ಕಂಬಳ ಆಯೋಜನೆ: ಸಮಿತಿಯ ಮಹಾಸಭೆಯಲ್ಲಿ ನಿರ್ಣಯ; ರಾತ್ರಿ ನಡೆಯಲ್ಲ ಕಂಬಳ
ಮಂಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯು ಜನವರಿ ತಿಂಗಳ ಕೊನೆಯಲ್ಲಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಂಬಳ ಆಯೋಜಿಸಲು ತೀರ್ಮಾನಿಸಿದೆ. ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ಸಮಿತಿಯ ಅಧ್ಯಕ್ಷ ಕೂಳೂರು ಪೊಯ್ಯೇಲು ಪಿ.ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಸರಕಾರದ ಕಾನೂನಿನ ಎಲ್ಲ ಮಾರ್ಗಸೂಚಿ ಅನುಕರಣೆ ಮಾಡಿಯೇ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಲಾಗುವುದು. […]