ಕಂಬಳ ಕ್ಷೇತ್ರದ ಸಾಧಕ ಕುಕ್ಕುಂದೂರು ಶಂಕರಬೆಟ್ಟು ಶಂಕರ ಮಡಿವಾಳ್ ನಿಧನ
ಕಾರ್ಕಳ: ಕಂಬಳ ಕ್ಷೇತ್ರದ ಸಾಧಕ, ಕೋಣಗಳ ಯಜಮಾನ ಹಾಗೂ ಖ್ಯಾತ ಕಂಬಳ ಓಟಗಾರರಾಗಿದ್ದ ಕಾರ್ಕಳದ ಕುಕ್ಕುಂದೂರು ಶಂಕರಬೆಟ್ಟು ಶಂಕರ ಮಡಿವಾಳ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಕಂಬಳ ಕ್ಷೇತ್ರದಲ್ಲಿ ಒಂದೆರಡು ದಶಕಗಳ ಕಾಲ ಓಟಗಾರನಾಗಿ, ಅನಂತರ ಯಶಸ್ವೀ ಯಜಮಾನರಾಗಿ ಹಲವು ಬಹುಮಾನಗಳನ್ನು ಪಡೆದಿದ್ದರು. ಅಲ್ಲದೇ ಯಶಸ್ವೀ ಫ್ಲಾಗ್ ರೆಫ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2003-2004ರಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಇವರ ಕೋಣಗಳು 18 ಕಂಬಳದಲ್ಲಿ 17 ಬಹುಮಾನ ಪಡೆದು ಚ್ಯಾಂಪಿಯನ್ ಆಗಿ ಸಾಧನೆ ಮಾಡಿದ್ದರು. ನೇಗಿಲು ಹಿರಿಯ, […]