ಕಲ್ಯಾಣಪುರ: ಡಿ. 17 ರಿಂದ ಶ್ರೀ ವೆಂಕಟರಮಣ ದೇವಳದಲ್ಲಿ ಅಹೋರಾತ್ರಿ ಭಜನಾ ಸಪ್ತಾಹ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಳದಲ್ಲಿ ಶ್ರೀ ವಿಠೋಬಾ ರುಖುಮಾಯಿ ಸನ್ನಿಧಿಯಲ್ಲಿ ಡಿ. 17 ರಿಂದ ಭಜನಾ ಸಪ್ತಾಹ ಆರಂಭಗೊಂಡು ಡಿ. 24 ವರೆಗೆ ನಡೆಯಲಿದೆ. ಊರ ಪರವೂರ ಭಜನಾ ತಂಡಗಳು ಅಹೋರಾತ್ರಿ ಭಜನೆ ನಡೆಸಲಿವೆ. ಡಿ. 17 ರ ಬೆಳ್ಳಿಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಬಳಿಕ ದೀಪ ಪ್ರಜ್ವಲನೆಯೊಂದಿಗೆ 95 ನೇ ವರ್ಷದ ಭಜನಾ ಮಹೋತ್ಸವ ಆರಂಭ ಗೊಳ್ಳಲಿದೆ. ದೇವರಿಗೆ ಪ್ರತಿ ದಿನ ವಿಶೇಷ ಹೂವಿನ ಅಲಂಕಾರ, ರಾತ್ರಿ ಪೇಟೆ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ […]

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಗರ ಭಜನೆ ಸಂಪನ್ನ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಯಾಣಪುರದಲ್ಲಿ 94ನೇ ಭಜನಾ ಸಪ್ತಾಹ ಅಂಗವಾಗಿ ನಗರ ಭಜನೆ ಶನಿವಾರ ಸಂಜೆ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ಸ್ವರ್ಣ ನದಿಗೆ ತೀರಕ್ಕೆ ತೆರಳಿ, ಅಲ್ಲಿಂದ ದೇವಾಲಯಕ್ಕೆ ಬಂದು ಸಂಪನ್ನಗೊಂಡಿತು. ಭಕ್ತರು ನೀಡಿದ ಫಲ ವಸ್ತುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ , ವಿನೋದ ಕಾಮತ್, ಡಾ. ಪಾಂಡುರಂಗ ಕಿಣಿ, ದೇವಳದ ಅರ್ಚಕ ಜಯದೇವ ಭಟ್, ಗಣಪತಿಭಟ್, […]