ಮಾರುಕಟ್ಟೆಗೆ ಬರಲು ರೆಡಿಯಾಗಿದೆ ಕಲ್ಪರಸ: ಇದು ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ!

ಉಡುಪಿ: ತೆಂಗಿನ ಹೊಂಬಾಳೆ (ಕೊಂಬು)ನಿಂದ ಶೋಧಿಸಿದ ‘ಕಲ್ಪರಸ’ ಎಂಬ ಆರೋಗ್ಯ ವರ್ಧಕ ಪಾನೀಯವನ್ನು ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದು ಎಳೆನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕವಾಗಿದ್ದು, ಅಧ್ಯಯನದಿಂದ ದೃಢಪಟ್ಟಿದೆ. ಸಂಸ್ಥೆಯು ಭಾರತೀಯ ಕಿಸಾನ್‌ ಸಂಘ ಹಾಗೂ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ರೂಪಿಸಿದೆ. ಕಲ್ಪರಸ ತೆಗೆಯುವ ವಿಧಾನ: ನೀರಾ ತೆಗೆಯುವ ಮಾದರಿಯಲ್ಲಿಯೇ ಈ ಕಲ್ಪರಸವನ್ನು ತೆಗೆಯಲಾಗುತ್ತದೆ. ನೀರಾವನ್ನು ತೆರೆದ ಮಡಿಕೆ […]