ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನಲ್ಲಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಪ್ರಾರಂಭ

ಉಡುಪಿ: ಕಲ್ಮಾಡಿಯಲ್ಲಿರುವ ಅವರ್ ಲೇಡಿ ವೆಲ್ಲಂಕಣಿ ಮಾತೆಯ ಕೇಂದ್ರವನ್ನು ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಣೆ ಮಾಡುವ ತಯಾರಿಯಲ್ಲಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಆಗಸ್ಟ್ 6 ಶನಿವಾರದಂದು ಪ್ರಾರಂಭವಾಯಿತು. ಕಲ್ಯಾಣಪುರದ ಅವರ್ ಲೇಡಿ ಆಫ್ ಮಿರಾಕಲ್ಸ್ ಕ್ಯಾಥೆಡ್ರಲ್‌ನ ರೆ.ಫಾ. ರೆಕ್ಟರ್ ವಲೇರಿಯನ್ ಮೆಂಡೋನ್ಸಾ ಧ್ವಜಾರೋಹಣ ನೆರವೇರಿಸಿ ಮೊದಲ ದಿನದ ನೊವೆನಾ ಪ್ರಾರ್ಥನೆ ನಡೆಸಿದರು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರು ವಂ. ರೋಯ್ ಲೋಬೊ, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, […]