ಬೆಳ್ತಂಗಡಿ: ಸೌಹಾರ್ದತೆಗಾಗಿ ಮಸೀದಿ ವಠಾರದಲ್ಲಿ ಮದುವೆ ಔತಣಕೂಟ
ಮಂಗಳೂರು: ಕೋಮು ಸಂಘರ್ಷವನ್ನು ಮೀರಿ, ಕೋಮು ಸೌಹಾರ್ದತೆಗಾಗಿ ಹಿಂದೂ ಜೋಡಿಯ ಮದುವೆಯ ಔತಣ ಕೂಟವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಜೂರು ಮಸೀದಿ ವಠಾರದಲ್ಲಿ ನಡೆಯಿತು. ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಾಜೂರಿನ ತುಂಗಪ್ಪ ಪೂಜಾರಿ ಮತ್ತು ದೇವಕಿ ದಂಪತಿ ಪುತ್ರ ಅವಿನಾಶ್ ಕೆ. ಹಾಗೂ ಮಂಗಳೂರಿನ ಜೆಪ್ಪು ವಿಶ್ವನಾಥ ಎಂಬವರ ಪುತ್ರಿ ಕೌಶಿಕಾರ ವಿವಾಹ ಬೆಳ್ತಂಗಡಿ ತಾಲೂಕಿನ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನೆರವೇರಿತು. ನದಿಯ ಒಂದು ದಡದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನವಿದೆ. […]