ಉಡುಪಿ-ಮಂಗಳೂರು ಲಯನ್ಸ್ ಕ್ಲಬ್ ಗಳ ಸಮಾಗಮ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಉಡುಪಿ ಮತ್ತು ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಈ ಎರಡು ಕ್ಲಬ್ ಗಳ ಸಮಾಗಮವು ಇತ್ತೀಚಿಗೆ ಉಡುಪಿಯ ಬಲೈಪಾದೆ ನಿತ್ಯಾನಂದ ಆರ್ಕೇಡ್ ಕಾಂಪ್ಲೆಕ್ಸ್ ಉದ್ಯಾವರ ಇಲ್ಲಿ ನೆರವೇರಿತು. ಜಿಲ್ಲಾ 317ಸಿಯ ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೆಲಿಯೋ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ರೀತಿಯ ಸಂಗಮ ಎರಡು ಜಿಲ್ಲೆಗಳ ಲಯನ್ ಸದಸ್ಯರು ಸಮಾಜಕ್ಕೆ ಇನ್ನೂ ಹೆಚ್ಚಿನ ಅಗತ್ಯ ಸೇವೆಗಳನ್ನು ಮಾಡುವ ಬಗ್ಗೆ ಮತ್ತು ಕ್ಲಬ್ ಗಳ ಮಧ್ಯೆ […]

ಒಂದೇ ರಂಗಸ್ಥಳ; 153 ಯಕ್ಷಗಾನ ವೇಷಗಳು: ಯಕ್ಷರಂಗದಲ್ಲಿ ಪ್ರಪ್ರಥಮ ಪ್ರಯೋಗ

ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ದ ಕದ್ರಿ ದೇವಸ್ಥಾನದಲ್ಲಿ ಭಾನುವಾರ ಸನಾತನ ಯಕ್ಷಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಶೀದೇವಿ ಲಲಿತೋಪಾಖ್ಯಾನ ಪ್ರಸಂಗ ನಡೆಯಲಿದ್ದು, ಇದೇ ಮೊದಲ ಬಾರಿಗೆ ಒಂದೇ ರಂಗಸ್ಥಳದಲ್ಲಿ 153 ವೇಷಗಳು ಮೇಳೈಸಿ ಇತಿಹಾಸ ಸೃಷ್ಟಿಯಾಗಲಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕದ್ರಿ ದೇವಸ್ಥಾನದಲ್ಲಿ ಯಕ್ಷಗಾನ ಪ್ರಸಂಗ ನಡೆಯಲಿದೆ. ಸಂಜೆ 5 ರಿಂದ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಗುರು ರಾಕೇಶ್ ರೈ ಅಡ್ಕ ಈ ಯಕ್ಷಗಾನವನ್ನು […]