ಕಡಿಯಾಳಿ ವಲಯ ಬ್ರಾಹ್ಮಣ ಸಮಿತಿಯ 26 ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಉಡುಪಿ: ಕಡಿಯಾಳಿ ವಲಯ ಬ್ರಾಹ್ಮಣ ಸಮಿತಿಯ 26 ನೇ ವಾರ್ಷಿಕೋತ್ಸವವು ವಲಯದ ಅಧ್ಯಕ್ಷ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಹಾಗೂ ಕಾರ್ಯದರ್ಶಿ ಸಂದೀಪ್ ಮಂಜ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಹಿರಿಯ ವಿದ್ವಾಂಸ ಡಾ.ಬಿ.ಗೋಪಾಲಾಚಾರ್ಯ ಹಾಗೂ ವೇದವ್ಯಾಸ ಪುರಾಣಿಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಲಯದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಲಯದ […]

ಕಡಿಯಾಳಿ ವಾರ್ಡ್ ಕಾಂಗ್ರೆಸ್ ಸಭೆ

ಉಡುಪಿ: ನಮಗೆ ಪ್ರಸಾದ್ ರಂತಹ ವಿದ್ಯಾವಂತ ನಾಯಕನ ಅಗತ್ಯವಿದೆ. ಜನರಿಗೆ ಬೇಕಾದ ಉತ್ತಮ ವಿಚಾರಗಳಿಗೆ ಮಾರ್ಗದರ್ಶನ ಮಾಡುವ ಕೌಶಲ್ಯ ಪ್ರಸಾದ್ ರಾಜ್ ಕಾಂಚನ್ ಅವರಿಗಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಭಾಕರ್ ನಾಯಕ್ ಹೇಳಿದರು. ಅವರು ಸೋಮವಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಕಡಿಯಾಳಿ ವಾರ್ಡ್ ಸಭೆಯ ಸಂದರ್ಭ ತಮ್ಮ ಸ್ವಗೃಹದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಉಡುಪಿ ವಿ.ಸಭಾ ಚುನಾವಣಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ದಿವಾಕರ್ ಕುಂದರ್, ಹರೀಶ್ ಕಿಣಿ ಮೊದಲಾದವರು […]

ಬೆಳಕಿನ ಹಬ್ಬದಂದು ಕತ್ತಲೆಯಲ್ಲಿದ್ದ ಮನೆಗಳಿಗೆ ಆಸರೆಯಾದ ಶಾಸಕ ರಘುಪತಿ ಭಟ್

ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ದಿನದಂದು ಉಡುಪಿ ನಗರದಲ್ಲಿ ಒಟ್ಟು 7 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಸರಳಬೆಟ್ಟು ವಾರ್ಡಿನ ಕೊರಗರ ಕಾಲೋನಿಯ 3 ಮನೆಗಳ ವಿದ್ಯುತ್ ಸಂಪರ್ಕಕ್ಕೆ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ರವಿರಾಜ್ […]

ಯು. ಕಮಲಾ ಬಾಯಿ ಶಾಲೆಯ ಹಳೆ ವಿದ್ಯಾರ್ಥಿಗಳ, ಅಧ್ಯಾಪಕರ ಮತ್ತು ಸಿಬ್ಬಂದಿಗಳ ಪುನರ್ ಮಿಲನದ ‘ತ್ರಿವೇಣಿ ಸಂಗಮ’

ಉಡುಪಿ: ಕಡಿಯಾಳಿಯ ಯು.ಕಮಲಾ ಬಾಯಿ ಪ್ರೌಢಶಾಲೆಯಲ್ಲಿಅ.23 ಭಾನುವಾರದಂದು ಶಾಲಾ ನಿವೃತ್ತ ಅಧ್ಯಾಪಕರು, ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರ ಪುನರ್ ಮಿಲನ ಕಾರ್ಯಕ್ರಮ ‘ತ್ರಿವೇಣಿ ಸಂಗಮ’ ಜರುಗಲಿದೆ. 1965 ರಲ್ಲಿ ಶಾಲೆ ಪ್ರಾರಂಭವಾದ ವರ್ಷದಿಂದ 2021ರ ವರೆಗಿನ ಎಲ್ಲಾ ಹಳೆಯ ವಿದ್ಯಾರ್ಥಿಗಳ ಪುನರ್ ಮಿಲನವು ಈ ಸಂದರ್ಭದಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮತ್ತೆ ಶಾಲಾ ಗತವೈಭವದ ನೆನಪು ಮರುಕಳಿಸಲಿದೆ. ಕಾರ್ಯಕ್ರಮದ ದಿನದಂದು ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಗೌರವಿಸಲಾಗುವುದು. ಅಂದಿನ ಕಾರ್ಯಕ್ರಮದ ವಿಶೇಷತೆ # 10.00 ಗಂಟೆಗೆ ಶಾಲೆಯಲ್ಲಿ ಪ್ರಥಮ […]

ದುರ್ಗಾದೌಡ್ ನಲ್ಲಿ ತಲವಾರು ಪ್ರದರ್ಶನ, ಪ್ರಚೋದನಕಾರಿ ಭಾಷಣ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಉಡುಪಿ: ನಗರದಲ್ಲಿ ಅಕ್ಟೋಬರ್ 2ರಂದು ಆಯೋಜಿಸಲಾಗಿದ್ದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮತ್ತು ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡಿರುವ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ದುರ್ಗಾ ದೌಡ್ ದಿನದಂದು ಕಡಿಯಾಳಿಯಿಂದ ರಾಜಾಂಗಣದವರೆಗೆ ಮೆರವಣಿಗೆ ನಡೆದಿದ್ದು, ಅದರಲ್ಲಿ 10-15 ಮಂದಿಯ ಗುಂಪು ತಲವಾರು ಪ್ರದರ್ಶಿಸಿದ್ದು, ಇದರಿಂದ ಭಯ ಹುಟ್ಟುಹಾಕಲಾಗಿದೆ ಎಂದು ಹುಸೇನ್ ಎಂಬವರು ದೂರು ನೀಡಿದ್ದು, ಈ ಹಿನೆಲೆಯಲ್ಲಿ ಐ.ಎಫ್.ಸಿ 1860(ಯು/ಎಸ್ 143, 149) ಆರ್ಮ್ ಆಕ್ಟ್1959(ಯು/ಎಸ್-27) ಅಡಿಯಲ್ಲಿ ಪ್ರಕರಣ […]