ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ: ಎ.2 ರಿಂದ ಗ್ರಾಮ ಭಜನೆ
ಉಡುಪಿ: ಉಡುಪಿ ಜಿಲ್ಲೆಯ 1400 ವರ್ಷ ಇತಿಹಾಸ ಇರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿದ್ದು ಮೇ 3ರಿಂದ ಮೇ 10ರ ತನಕ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪೂರ್ವಬಾವಿಯಾಗಿ ಸಮಸ್ತ ಕಡಿಯಾಳಿ ಗ್ರಾಮದ ಮನೆ ಮನೆಗಳಲ್ಲಿ ‘ಗ್ರಾಮ ಭಜನೆ’ ಎಂಬ ವಿನೂತನ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 2 ಶನಿವಾರ ಚಂದ್ರಮಾನ ಯುಗಾದಿಯ ಪರ್ವ ಕಾಲದಲ್ಲಿ ಸಂಜೆ 4 ಗಂಟೆಗೆ ಕಾಣಿಯೂರು ಮಠಾದೀಶರಾದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ. ಈ […]