ಕಿನ್ನಿಗೋಳಿ:ತಾಳಿಪಾಡಿ ಪ್ರಾಥಮಿಕ ನೇಕಾರರ ಸಂಘದಲ್ಲಿ ನೇಕಾರ ಆನಂದ ಶೆಟ್ಟಿಗಾರ್ ಅವರಿಗೆ ಪುರಸ್ಕಾರ ಕಾರ್ಯಕ್ರಮ

ಕಿನ್ನಿಗೋಳಿ: ಕದಿಕೆ ಟ್ರಸ್ಟ್ ವತಿಯಿಂದ ನೇಕಾರರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಜು.28 ರಂದು  ಕಿನ್ನಿಗೋಳಿಯ ನೇಕಾರ ಸಭಾಭವನದಲ್ಲಿ ನಡೆಯಿತು. 47 ವರ್ಷಗಳಿಂದ ನೇಕಾರಿಕೆಯಲ್ಲಿ ತೊಡಗಿಕೊಂಡು ಇದೀಗ  ಉಡುಪಿ ಸೀರೆಯನ್ನು ನೇಯುತ್ತಿರುವ, ಮತ್ತು ನೇಕಾರಿಕೆಯಲ್ಲಿಯೇ ಜೀವನ ಕಟ್ಟಿಕೊಂಡಿರುವ  ಆನಂದ ಶೆಟ್ಟಿಗಾರ್ ಅವರನ್ನು ಟ್ರಸ್ಟ್ ವತಿಯಿಂದ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ  ತಾಳಿಪಾಡಿ ಪ್ರಾಥಮಿಕ ನೇಕಾರರ ಸಂಘದ ನಿರ್ದೇಶಕರಾದ ಮಾಧವ ಶೆಟ್ಟಿಗಾರ್, ಅಧ್ಯಕ್ಷರಾದ  ಆನಂದ ಶೆಟ್ಟಿಗಾರ್, ಕದಿಕೆ ಟ್ರಸ್ಟ್ ನ  ಚಿಕ್ಕಪ್ಪ ಶೆಟ್ಟಿ, ಮಮತಾ ರೈ, ಪುರುಷೋತ್ತಮ ಅಡ್ವೆ, ಹಿರಿಯ ನೇಕಾರರು, […]