ಕಡೆಕಾರು ರಂಜಿತ ಕೊಲೆ ಪ್ರಕರಣ: ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ
ಉಡುಪಿ: ಕಳೆದ ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟ ಎಂಬಲ್ಲಿ ನಡೆದ ರಂಜಿತ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಂದು ಜೀವಿತಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪಟೇಲ್ ತೋಟದ ನಿವಾಸಿ ಯೋಗೀಶ್ (32) ಜೀವಿತಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಘಟನೆಯ ವಿವರ: ಆರೋಪಿ ಯೋಗೀಶ್ ತನ್ನ ಮನೆಯ ಹತ್ತಿರದ ನಿವಾಸಿಯಾಗಿದ್ದ ಸುಮತಿ ಎಂಬುವವರ ಮಗಳು 19 ವರ್ಷ ಪ್ರಾಯದ ರಂಜಿತಾಳನ್ನು ದಾರಿ ಮಧ್ಯೆ […]