ಹೊಳೆಯಲ್ಲಿ ಪತ್ತೆಯಾಯಿತು 30 ಕೆ.ಜಿ. ಗಾತ್ರದ ಮೀನು

ಕುಂದಾಪುರ : ಕುಂದಾಪುರ ತಾಲೂಕಿನ ಕೊಡೇರಿಯ ಎಡಮಾವಿನ ಹೊಳೆಯಲ್ಲಿ ಬುಧವಾರ ಸ್ಥಳೀಯ ಮೀನುಗಾರರಾದ ಸುಧೀರ್ ಹಾಗೂ ವಿಶ್ವನಾಥ್ ಸಹೋದರರಿಗೆ ಬೃಹತ್ ಗಾತ್ರದ ಕಾದರ್ (ಅವರ್ಗಿ) ಮೀನು ದೊರೆತಿದೆ. ಈ ಮೀನು ಸುಮಾರು 30 ಕೆಜಿ ಇದೆ. ಆಳ ಸಮುದ್ರಲ್ಲಿ ಇರುವ ಈ ಮೀನು ಹೊಳೆಯಲ್ಲಿ ಸಿಕ್ಕಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.