ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಸಾವು
ಚಿಕ್ಕಮಗಳೂರು: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು, ಚಿಕ್ಕಮಗಳೂರು ತೇಗೂರು ಗ್ರಾಮದ ನಿವಾಸಿ ವಿನೋದ್ ರಾಜ್ (24) ಸಾವನ್ನಪ್ಪಿದ್ದಾರೆ. ವಿನೋದ್ ರಾಜ್ ಇತ್ತೀಚೆಗಷ್ಟೇ ತನ್ನದೇ ಊರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಬಗ್ಗೆ ಎರಡೂ ಮನೆಯವರ ನಡುವೆ ತಕಾರಾರುಗಳಿದ್ದವು. ಈ ನಡುವೆ ಯುವತಿ ತವರು ಮನೆಗೆಂದು ತೆರಳಿದ್ದು, ಬಳಿಕ ಹಿಂದಿರುಗಿ ಬಂದಿರಲಿಲ್ಲ. ಈ ಘಟನೆಯಾದ ಬಳಿಕ ವಿನೋದ್ ರಾಜ್ ಖಿನ್ನತಗೆ ಜಾರಿದ್ದು, ನೇಣುಬಿಗಿದುಕೊಂಡಿದ್ದರು. ತಕ್ಷಣವೇ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ […]
ಏಷ್ಯನ್ ಗೇಮ್ಸ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತೀಯ ಪುರುಷರ ಕಬಡ್ಡಿ ತಂಡ
ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಭಾರತೀಯ ಪುರುಷರ ಕಬಡ್ಡಿ ತಂಡವು ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತು. ಪವನ್ ಸೆಹ್ರಾವತ್ ನೇತೃತ್ವದ ಭಾರತವು ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು ಮತ್ತು ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ 61-14 ಅಂತರದಿಂದ ಜಯಗಳಿಸಿತು. ಶನಿವಾರ ಇರಾನ್ ಮತ್ತು ಚೈನೀಸ್ ತೈಪೆ ನಡುವಿನ ಇನ್ನೊಂದು ಸೆಮಿಫೈನಲ್ ನಡೆಯಲಿದೆ. ಭಾರತವು ಫೈನಲ್ ನಲ್ಲಿ ಈ ಎರಡಲ್ಲಿ ವಿಜೇತರಾದ ತಂಡವನ್ನು ಎದುರಿಸಲಿದೆ. ಮೊದಲ ನಾಲ್ಕು ಅಂಕಗಳನ್ನು ಗಳಿಸಿದ ಪಾಕಿಸ್ತಾನವು ಪಂದ್ಯವನ್ನು ಬಲಿಷ್ಠವಾಗಿ […]
ಡಿ.24ರಂದು ಅಟಲ್ ಉತ್ಸವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ
ಉಡುಪಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಡಿ. 24ರಂದು ಸಂಜೆ 5ಗಂಟೆಗೆ “ಅಟಲ್ ಉತ್ಸವ” ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಕೂಟ ಹಾಗೂ ಡಿ. 25ರಂದು ಸಂಜೆ 4ಗಂಟೆಗೆ ಬೂತ್ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಎರಡು ಕಾರ್ಯಕ್ರಮಗಳೂ ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಮಂಗಳವಾರ […]
ಡಿ .25 ರಂದು ಜಿಲ್ಲೆಯಲ್ಲಿ ಅಟಲ್ ಉತ್ಸವ; ಬೂತ್ ಸಂಗಮ ಕಾರ್ಯಕ್ರಮ
ಉಡುಪಿಯ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಮಾಜಿ ಪ್ರಧಾನಮಂತ್ರಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿಯಲ್ಲಿ ನಡೆಯಲಿರುವ ಅಟಲ್ ಬಿಹಾರಿ ಉತ್ಸವ ಪ್ರಯುಕ್ತ ಡಿ .25 ರಂದು ಬೂತ್ ಸಂಗಮ ಕಾರ್ಯಕ್ರಮವು ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಇದರ ಚಪ್ಪರ ಮುಹೂರ್ತವನ್ನು ಸೋಮವಾರದಂದು ಶಾಸಕ ಕೆ ರಘುಪತಿ ಭಟ್ ನೆರವೇರಿಸಿದರು. ಉತ್ಸವದ ಅಂಗವಾಗಿ ಡಿ.24 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ […]