ಅಪಪ್ರಚಾರಕ್ಕಿಳಿದ ವಾಹಿನಿ ವಿರುದ್ದ ಆಕ್ರೋಶ ; ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇನೆ ಎಂದ ಶಾಸಕ.

ಕುಂದಾಪುರ: ನಾನು ಯಡಿಯೂರಪ್ಪನವರ ನಿಕಟವರ್ತಿಯಾಗಿದ್ದು, ಅಪ್ಪಟ ಹಿಂದೂತ್ವಾದಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂದು ಮಹದಾಸೆ ಇಟ್ಟುಕೊಂಡಿದ್ದ ನನ್ನ ಮೇಲೆ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಹೇಳಿದರು. ಖಾಸಗಿ ವಾಹಿನಿಯೊಂದರಲ್ಲಿ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಭಿತ್ತರವಾದ ಬೆನ್ನಲ್ಲೇ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಾಮಾಣಿಕವಾಗಿ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿ ನಾನು. ಹಣಕ್ಕೆ ಹೆಚ್ಚು ಮಹತ್ವ ಕೊಟ್ಟವನಲ್ಲ. ಹತ್ತು ವರ್ಷಗಳ ಕಾಲ ಕೊಲ್ಲೂರು ದೇವಸ್ಥಾನದ ಆಡಳಿತ ನಡೆಸಿದ್ದೆ. […]